Author name: Bhuvana

ಶಾರ್ಜಾದಲ್ಲಿ ಉಡುಪಿಯ ಪ್ರಕಾಶ್ ಕುಂದರ್ ಹತ್ಯೆ: ಪತ್ನಿ, ಪುತ್ರ ನಾಪತ್ತೆ

ಉಡುಪಿ: ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದ ಉಡುಪಿ ಮೂಲದ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಅವರ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ. ಪ್ರಕಾಶ್ ಅವರು ಪತ್ನಿ ಟೀನಾ ಮತ್ತು ಪುತ್ರನ ಜೊತೆಗೆ ಶಾರ್ಜಾದಲ್ಲಿ ‌ವಾಸವಾಗಿದ್ದರು. ಸಹೋದರ ಪ್ರಶಾಂತ್ ಕುಂದರ್ ಅವರು ಪ್ರಕಾಶ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು, ಸಾಧಾರಣವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಅವರು ಆ ಬಾರಿ ಟೆಕ್ಸ್ಟ್ ಸಂದೇಶಗಳನ್ನು

ಶಾರ್ಜಾದಲ್ಲಿ ಉಡುಪಿಯ ಪ್ರಕಾಶ್ ಕುಂದರ್ ಹತ್ಯೆ: ಪತ್ನಿ, ಪುತ್ರ ನಾಪತ್ತೆ Read More »

ಸರಕಾರಕ್ಕೆ ಮುಜುಗರ ತಂದ ಹಣಕಾಸು ಇಲಾಖೆ ಟಿಪ್ಪಣಿ : ಮುಗಿಬಿದ್ದ ಬಿಜೆಪಿ 

ಬೊಕ್ಕಸದಲ್ಲಿ ಹಣವಿಲ್ಲದಿರುವುದರಿಂದ ಹೊಸ ಯೋಜನೆ ಘೋಷಣೆ ಬೇಡ ಎಂದು ಹಣಕಾಸು ಇಲಾಖೆ ಟಿಪ್ಪಣಿ  ಕರಾವಳಿಗೆ ಘೋಷಿಸಿದ 32,611 ಕೋಟಿ ಅಭಿವೃದ್ಧಿ ಯೋಜನೆ ಬರೀ ಬೋಗಸ್‌ ಎಂದ ಬಿಜೆಪಿ ಬೆಂಗಳೂರು : ರಾಜ್ಯಕ್ಕೆ ತೀವ್ರ ಬರಗಾಲ ಬಂದಿರುವ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಭಾರಿ ಮೊತ್ತ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಹೊಸ ಯಾವುದೇ ಯೋಜನೆಯನ್ನು ಘೋಷಿಸಬಾರದು ಎಂದು ಹಣಕಾಸು ಇಲಾಖೆ ಸರಕಾರಕ್ಕೆ ಸೂಚಿಸಿರುವುದು ಈಗ ಭಾರಿ ಚರ್ಚೆಗೀಡಾಗಿದೆ. ವಿಶೇಷ ಅಧಿವೇಶನ ನಡೆಯುತ್ತಿರುವಾಗಲೇ ಹಣಕಾಸು ಇಲಾಖೆ ಹೊಸ ಯೋಜನೆಗಳಿಗೆ

ಸರಕಾರಕ್ಕೆ ಮುಜುಗರ ತಂದ ಹಣಕಾಸು ಇಲಾಖೆ ಟಿಪ್ಪಣಿ : ಮುಗಿಬಿದ್ದ ಬಿಜೆಪಿ  Read More »

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ

ವಡೋದರ: ಗುಜರಾತಿನ ಏಕತಾನಗರದಲ್ಲಿ ನಡೆದ 72 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಳುನಾಡಿನ ಪ್ರತಿಭೆ, ನಟಿ ರೂಪಶ್ರೀ ವರ್ಕಾಡಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪುರಸ್ಕಾರ ಲಭಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರೂಪಶ್ರೀ ಅವರು ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ತುಳುನಾಡಿಗೆ ಹೆಮ್ಮೆ ತಂದಿದ್ದಾರೆ. ಮಿಥ್ಯ ಎಂಬ ಕನ್ನಡ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ರೂಪಶ್ರೀ ಅವರಿಗೆ ಈ ಪುರಸ್ಕಾರ ಲಭಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ Read More »

ರಾಷ್ಟ್ರಪತಿಗಳಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಹಿರಿಯ ನಟ ಅನಂತನಾಗ್

ವಡೋದರಾ: ದೇಶದ ಪ್ರತಿಷ್ಠಿತ ಸಿನೆಮಾ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಯನ್ನು ಕನ್ನಡದ ಹಿರಿಯ ನಟ ಅನಂತನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್‌‌ ಏಕತಾನಗರದಲ್ಲಿ ‌ನಡೆದ ಸಮಾರಂಭದಲ್ಲಿ ಪ್ರದಾನಿಸಿದರು. ಪುರಸ್ಕಾರ ಪಡೆದ ಬಳಿಕ ಮಾತನಾಡಿದ ಅನಂತನಾಗ್, ರಾಷ್ಟ್ರಪತಿಗಳಿಗೆ ‌ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಈ ಪ್ರಶಸ್ತಿ ನನ್ನ ಪಾಲಿಗೆ ವಿಶೇಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಅತ್ಯಂತ ಗೌರವದ ಸಂಗತಿ. ಈ ಪ್ರಶಸ್ತಿಯ ಮಹತ್ವ ಮತ್ತು ಅದರ ಭವ್ಯತೆಯನ್ನು ಇನ್ನೂ ಸಂಪೂರ್ಣವಾಗಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ರಾಷ್ಟ್ರಪತಿಗಳಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಹಿರಿಯ ನಟ ಅನಂತನಾಗ್ Read More »

ಶ್ಯಾಂಪೂ, ಸೋಪ್, ಟೂತ್‌ಪೇಸ್ಟ್‌ ಕವರ್‌ಗಳ ಮೇಲೂ ವೆಜ್ / ನಾನ್‌ವೆಜ್ ಚಿಹ್ನೆ ಕಡ್ಡಾಯ

ನವದೆಹಲಿ: ಶ್ಯಾಂಪೂ, ಸೋಪು, ಟೂತ್‌ಪೇಸ್ಟ್‌ಗಳಿಗೂ ಇನ್ನು ಮುಂದೆ ವೆಜ್ ಅಥವಾ ನಾನ್‌ವೆಜ್ ಗುರುತು ಕಡ್ಡಾಯಗೊಳಿಸುವಂತೆ ‌ಸರ್ಕಾರ ಆದೇಶ ಹೊರಡಿಸಿದೆ. ಸೌಂದರ್ಯವರ್ಧಕಗಳು, ಸೋಪು, ಶ್ಯಾಂಪೂ ಇತ್ಯಾದಿಗಳನ್ನು ಎಷ್ಟೇ ಸುಂದರವಾಗಿ ಪ್ಯಾಕ್ ಮಾಡಿ. ಆದರೆ ಅದನ್ನು ವೆಜ್‌ನಿಂದ ತಯಾರಿಸಲಾಗಿದೆಯೋ ಅಥವಾ ನಾನ್‌ವೆಜ್‌ನಿಂದ ತಯಾರಿಸಲಾಗಿದೆಯೋ ಎನ್ನುವ ಮಾಹಿತಿಯನ್ನು ಬಳಕೆದಾರರಿಗೆ ತಲುಪಿಸುವುದು ಮುಖ್ಯ ಎಂದು ಸರ್ಕಾರ ತಿಳಿಸಿದೆ. ಈ ನಿಯಮಗಳು ತಕ್ಷಣದಿಂದಲೇ ‌ಜಾರಿಯಾಗಲಿವೆ ಎಂದು ತಿಳಿದು ಬಂದಿವೆ. ಸೌಂದರ್ಯವರ್ಧಕಗಳಲ್ಲಿ ಮಾಂಸದಂತಹ ಕೆಲವು ಪದಾರ್ಥಗಳನ್ನು ಬಳಸಲಾಗುತ್ತದೆ ಎನ್ನುವ ಮಾತಿನಿಂದಾಗಿ ಹಲವು ಮಂದಿ ಸಸ್ಯಹಾರಿಗಳು ಅವುಗಳನ್ನು

ಶ್ಯಾಂಪೂ, ಸೋಪ್, ಟೂತ್‌ಪೇಸ್ಟ್‌ ಕವರ್‌ಗಳ ಮೇಲೂ ವೆಜ್ / ನಾನ್‌ವೆಜ್ ಚಿಹ್ನೆ ಕಡ್ಡಾಯ Read More »

ಕಾರ್ಕಳ ಥೀಮ್ ಪಾರ್ಕ್‌ ಕುರಿತ ಜನಾಗ್ರಹ ಸಭೆಯ ಪೂರ್ವಭಾವಿ ಸಭೆ

ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಸಂಬಂಧಿಸಿದಂತೆ ಸೆ. 24 ರಂದು ಜನಾಗ್ರಹ ಸಭೆ ನಡೆಯಲಿದ್ದು, ಅದರ ಪೂರ್ವಭಾವಿ ಸಭೆಯು ಊರ ಪ್ರಮುಖರ ಸಮ್ಮುಖದಲ್ಲಿ ನಡೆಯಿತು. ಯರ್ಲಪ್ಪಾಡಿ ಬೈಲೂರು ಪರಶುರಾಮ ಥೀಮ್ ಪಾರ್ಕ್ ಜನಾಗ್ರಹ ಸಮಿತಿಯ ವತಿಯಿಂದ ಜನಾಗ್ರಹ ‌ಸಭೆ ನಡೆಯಲಿದೆ. ಸೆ.24 ರ ಸಂಜೆ 5 ಗಂಟೆಗೆ ಬೈಲೂರು ಮಾರಿ ಗುಡಿ ಸಭಾಂಗಣದಲ್ಲಿ ಸಭೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕೋರಲಾಗಿದೆ. ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಂದುವರೆಸುವುದು ಮತ್ತು ಪಾರ್ಕ್‌ಗೆ ಸಾರ್ವಜನಿಕರ ಮುಕ್ತ

ಕಾರ್ಕಳ ಥೀಮ್ ಪಾರ್ಕ್‌ ಕುರಿತ ಜನಾಗ್ರಹ ಸಭೆಯ ಪೂರ್ವಭಾವಿ ಸಭೆ Read More »

ಸಾರಿ ಕುಚ್ಚು, ಬಾಕ್ಸ್ ಫೋಲ್ಡಿಂಗ್ ತರಬೇತಿ ಶಿಬಿರ

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಟಿ.ಎಮ್.ಜಿ. ಸುನಿಧಿ ಫೌಂಡೇಷನ್, ಮಣಿಪಾಲ, ಗ್ರಾಮ ಪಂಚಾಯತ್ ಬೈಲೂರು ಹಾಗೂ ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಾದರಿ ಒಕ್ಕೂಟ(ರಿ) ಬೈಲೂರು ಇವರ ಸಹಯೋಗದಲ್ಲಿ 10 ದಿನಗಳ ಸಾರಿ ಕುಚ್ಚು ಮತ್ತು ಸಾರಿ ಬಾಕ್ಸ್ ಫೋಲ್ಡಿಂಗ್ ತರಬೇತಿ ಕಾರ್ಯಕ್ರಮವನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸುಕೇಶ್ ಪೂಜಾರಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತರಬೇತಿಯನ್ನು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಅವರು ಶುಭ ಹಾರೈಸಿದರು. ಬಿವಿಟಿಯ ಕಾರ್ಯಕ್ರಮ

ಸಾರಿ ಕುಚ್ಚು, ಬಾಕ್ಸ್ ಫೋಲ್ಡಿಂಗ್ ತರಬೇತಿ ಶಿಬಿರ Read More »

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್: ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಪುನರಾಯ್ಕೆ

ಕಾರ್ಕಳ: ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಪುನರಾಯ್ಕೆಯಾಗಿದ್ದಾರೆ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಹಾಗೂ ಗೌರವಾಧ್ಯಕ್ಷರಾಗಿ ಅವಿನಾಶ್ ಜಿ ಶೆಟ್ಟಿ ಹಾಗೂ ಸುಕೇಶ್ ಈಶ್ವರ್ ಇವರು ನೇಮಕಗೊಂಡರು. ಈ ಸಂಬಂಧ ಸೆ. 21 ರಂದುಗಾಂಧಿ ಮೈದಾನದ ವೇದಿಕೆಯಲ್ಲಿ ನಡೆದ ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್‌ನ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮುಂದಿನ 2 ವರ್ಷಗಳ ಕಾಲ ಸಮಿತಿಯಲ್ಲಿ ಯಾವುದೇ ಬದಲಾವಣೆ ಆಗಬಾರದು ಎಂದು ಎಲ್ಲರ ಸಮ್ಮುಖದಲ್ಲಿ ಎಲ್ಲರ

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್: ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಪುನರಾಯ್ಕೆ Read More »

22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಕೋಟೆ ಎಸ್. ರಾಮ ಭಟ್ಟ ಆಯ್ಕೆ

ಉಡುಪಿ: 22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೋಟೆ ಎಸ್. ರಾಮ ಭಟ್ಟ ಅವರು ಆಯ್ಕೆಯಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ರಾಜೇಶ್ವರಿ ಎಜುಕೇಶನ್ ಫೌಂಡೇಷನ್ (ರಿ.) ಸಾಣೂರು ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 7 ರಂದು ರಾಜೇಶ್ವರಿ ನ್ಯಾಷನಲ್ ಕಾಲೇಜ್ ಸಾಣೂರು ಕಾರ್ಕಳ ಇಲ್ಲಿ ನಡೆಯಲಿದೆ. ಸಾಹಿತಿ ಖ್ಯಾತ ಯಕ್ಷಗಾನ ಅರ್ಥಧಾರಿ ,ವೇಷಧಾರಿ ಯಕ್ಷಗಾನ ಸಂಘಟಕ ವಾಗ್ಮಿ, ಉಪನ್ಯಾಸಕ

22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಕೋಟೆ ಎಸ್. ರಾಮ ಭಟ್ಟ ಆಯ್ಕೆ Read More »

ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಕಾರ್ಕಳ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್. ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕರ್ತವ್ಯದ ಸಮಯದಲ್ಲೇ ಕಚೇರಿಯ ಮಹಿಳಾ‌ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ‌ವರ್ತಿಸುತ್ತಿದ್ದುದಾಗಿ ಜಿಲ್ಲಾಧಿಕಾರಿಗಳಿಗೆ ‌ಮಹಿಳಾ ಅಧಿಕಾರಿಗಳು ದೂರು ನೀಡಿದ್ದಾರೆ. ಕೆಲಸದ ವಿಷಯವವಾಗಿ ತಮ್ಮ ಕಚೇರಿಗೆ ಮಹಿಳಾ ಅಧಿಕಾರಿಗಳನ್ನು ಕರೆಸಿಕೊಂಡು ಅಲ್ಲಿ ಅನುಚಿತ ವರ್ತನೆ ತೋರುತ್ತಿದ್ದರು ಎಂದು ಮಹಿಳಾ ಸಿಬ್ಬಂದಿ ಆರೋಪಿಸಿರುವುದಾಗಿದೆ. ಹಾಗೆಯೇ ಆರೋಪಿ ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ವಿಚಾರಣೆ ನಡೆಸಿ ಅವರನ್ನು

ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ವಿರುದ್ಧ ಜಿಲ್ಲಾಧಿಕಾರಿಗೆ ದೂರು Read More »

error: Content is protected !!
Scroll to Top