Author name: News desk

ಹಕ್ಕು ಪತ್ರ ಮತ್ತು ವಿವಿಧ ಸವಲತ್ತುಗಳ‌ ವಿತರಣೆ

ಕುಮ್ಕಿ ಜಾಗದವರಿಗೂ ಹಕ್ಕುಪತ್ರ ನೀಡುವತ್ತ ಚಿಂತನೆ – ಸುನಿಲ್ ಕುಮಾರ್ ಕಾರ್ಕಳ : ಸರಕಾರಿ ಜಾಗದಲ್ಲಿ ವಾಸವಿರುವರಿಗೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಿಸಿ ಕಳೆದ ಎರಡು ವರ್ಷಗಳಿಂದ ಹಕ್ಕು ಪತ್ರ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕುಮ್ಕಿ ಜಾಗದಲ್ಲಿದ್ದವರಿಗೆ ಹಕ್ಕು ಪತ್ರ ವಿತರಣೆಯಾಗಿಲ್ಲ.‌ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಕುಮ್ಕಿಯ ವ್ಯವಸ್ಥೆಯಿದ್ದು, ಈ‌‌ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದು ಹಕ್ಕು ಪತ್ರ ವಿತರಿಸಲಾಗುವುದು ಎಂದು ಶಾಸಕ‌ ವಿ. ಸುನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಾ.‌೧೧ ರಂದು […]

ಹಕ್ಕು ಪತ್ರ ಮತ್ತು ವಿವಿಧ ಸವಲತ್ತುಗಳ‌ ವಿತರಣೆ Read More »

ಬಸ್​ ಮೇಲೆ ಹೈಟೆನ್ಷನ್ ತಂತಿ ಬಿದ್ದು ಹೊತ್ತಿಕೊಂಡ ಬೆಂಕಿ : 6 ಮಂದಿ ಸಜೀವ ದಹನ

ಉತ್ತರ ಪ್ರದೇಶ : ಗಾಜಿಪುರದಲ್ಲಿ ಭಾರಿ ಅಪಘಾತ ಸಂಭವಿಸಿದೆ, ಬಸ್​ ಮೇಲೆ ಹೈ ಟೆನ್ಷನ್ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, 6 ಮಂದಿ ಸಜೀವ ದಹನವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ವಲ್ಪ ಸಮಯದಲ್ಲೇ ಬೆಂಕಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ಪ್ರಕಾರ ಬೆಂಕಿಯಲ್ಲಿ ಆರು ಮಂದಿ ಸಜೀವ ದಹನವಾಗಿದ್ದಾರೆ. ಈ ಅವಘಡದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿರು ಸಾಧ್ಯತೆ ಇದೆ. ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಮರ್ದಾದಲ್ಲಿ ಅಪಘಾತ

ಬಸ್​ ಮೇಲೆ ಹೈಟೆನ್ಷನ್ ತಂತಿ ಬಿದ್ದು ಹೊತ್ತಿಕೊಂಡ ಬೆಂಕಿ : 6 ಮಂದಿ ಸಜೀವ ದಹನ Read More »

ಕಲರ್ ಕಾಟನ್‌ ಕ್ಯಾಂಡಿ ಬ್ಯಾನ್ : ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವಂತಿಲ್ಲ

ನಿಯಮ ಉಲ್ಲಂಘಿಸಿದರೆ ರೂ.10 ಲಕ್ಷ ದಂಡ, 7 ವರ್ಷ ಶಿಕ್ಷೆ ಬೆಂಗಳೂರು : ಕರ್ನಾಟಕದಲ್ಲಿ ಕಲರ್‌ ಕಾಟನ್‌ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್‌ ಕಾಟನ್‌ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಮಾ.11 ರಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕದಲ್ಲಿ ಕಲರ್ ಕಾಟನ್​

ಕಲರ್ ಕಾಟನ್‌ ಕ್ಯಾಂಡಿ ಬ್ಯಾನ್ : ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವಂತಿಲ್ಲ Read More »

ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ

ಕಾರ್ಕಳ : ವೇಗವಾಗಿ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಸಬಾ ಗ್ರಾಮದ ಮ್ಯಾಡಿಸ್‌ ಕಟ್ಟಿ ಕೆಫೆ ಸಮೀಪ ರಸ್ತೆ ಬದಿ ಮಲಗಿದ್ದ ಗಣೇಶ ಎಂಬವರ ಕಾಲುಗಳ ಮೇಲೆ ಚಲಿಸಿದ ಪರಿಣಾಮ ಗಣೇಶ ಅವರ ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಮಾ.9ರ ರಾತ್ರಿ 11.45ರ ವೇಳೆಗೆ ಘಟನೆ ಸಂಭವಿಸಿದ್ದು, ಪೆರ್ವಾಜೆ ಕಸಬಾದ ರಾಮನಾಥ ಎಂಬವರು ನೀಡಿದ ದೂರಿನ ಪ್ರಕಾರ ನಗರ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಲಾರಿ ಪಲ್ಟಿಯಾಗಿ ಡ್ರೈವರ್‌, ಕ್ಲೀನರ್‌ಗೆ

ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ Read More »

ಸಾಣೂರು ಮುದ್ದಣ್ಣನಗರ ಶಾಲೆಗೆ ಲಯನ್ಸ್‌ ಸಿಟಿ ವತಿಯಿಂದ ಕಂಪ್ಯೂಟರ್‌ ಹಸ್ತಾಂತರ

ಕಾರ್ಕಳ : ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್‌ ಮೂಲಕ ಪ್ರಾಮಾಣಿಕವಾಗಿ ಸಮಾಜಕ್ಕೆ ಅಳಿಲು ಸೇವೆ ಮಾಡುವ ನಿಟ್ಟಿನಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಹುಟ್ಟಿಕೊಂಡಿದೆ. ಶಾಲೆಯ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಅರಿತು ಇಂದು ಗಣಕಯಂತ್ರವನ್ನು ಹಸ್ತಾಂತರಿಸಿದ್ದೇವೆ. ಮುಂದಿನ ದಿನಗಳಲ್ಲೂ ಉತ್ತಮ ಸೇವೆಯನ್ನು ಮಾಡುವಲ್ಲಿ ಶಾಲೆಗೆ ಖಂಡಿತವಾಗಿಯೂ ಶ್ರಮಿಸುತ್ತೇವೆ ಎಂದು ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್‌ ತಿಳಿಸಿದರು. ಅವರು ಮಾ. 9ರಂದು ಸಾಣೂರು ಮುದ್ದಣ್ಣನಗರ ಪ್ರಾಥಮಿಕ ಶಾಲೆಗೆ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ

ಸಾಣೂರು ಮುದ್ದಣ್ಣನಗರ ಶಾಲೆಗೆ ಲಯನ್ಸ್‌ ಸಿಟಿ ವತಿಯಿಂದ ಕಂಪ್ಯೂಟರ್‌ ಹಸ್ತಾಂತರ Read More »

ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ : 7 ನಗರಗಳಲ್ಲಿ ಏಜೆಂಟರ ಮೇಲೆ ಸಿಬಿಐ ದಾಳಿ

ನವದೆಹಲಿ : ರಷ್ಯಾದಲ್ಲಿ ಭಾರತೀಯರ ಸಾವು ಪ್ರಕರಣದ ಬೆನ್ನಲ್ಲೇ ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ 7 ನಗರಗಳಲ್ಲಿ ಸಿಬಿಐ ದಾಳಿ ನಡೆಸಿದೆ. ರಷ್ಯಾದಲ್ಲಿ ಭದ್ರತಾ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಭಾರತೀಯರನ್ನು ರಷ್ಯಾದ ಯುದ್ಧ ವಲಯಕ್ಕೆ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ 7 ನಗರಗಳಲ್ಲಿನ ವೀಸಾ ಏಜೆಂಟ್‌ಗಳು, ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ : 7 ನಗರಗಳಲ್ಲಿ ಏಜೆಂಟರ ಮೇಲೆ ಸಿಬಿಐ ದಾಳಿ Read More »

ಕನ್ನಡೇತರ ನಾಮಫಲಕ ತೆರವಿಗೆ ತುಳುನಾಡಿನಲ್ಲಿ ವಿರೋಧ : ಯಾವುದೇ ಬೋರ್ಡ್​ ಮುಟ್ಟದಂತೆ ಎಚ್ಚರಿಕೆ

ಮಂಗಳೂರು : ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ತುಳುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ ನಡೆಯುತ್ತಿರುವ ಹಿನ್ನೆಲೆ ಆಕ್ರೋಶಗೊಂಡಿರುವ ತುಳು ಭಾಷೆ ಹೋರಾಟಗಾರರು ತುಳುನಾಡಿನಲ್ಲಿ ಯಾವುದೇ ಬೋರ್ಡ್​​ ಮುಟ್ಟದಂತೆ ಎಚ್ಚರಿಕೆ ನೀಡಿದ್ದಾರೆ. ಪ್ರೀತಿಯಿಂದ ಭಾಷೆಗಳನ್ನು ಬಳಸಬೇಕೇ ಹೊರತು ಒತ್ತಾಯದ ಹೇರಿಕೆ ಸರಿಯಲ್ಲ ಎಂದು ತುಳು ಹೋರಾಟಗಾರ ರೋಷನ್ ರೇನಾಲ್ಡ್ ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರದ ಕಡತಗಳಲ್ಲೇ ಇಂಗ್ಲೀಷ್ ಇದೆ. ಇವರು ಮೊದಲು ಅದನ್ನೆಲ್ಲಾ ತೆಗೆಯಲಿ ಎಂದರು.

ಕನ್ನಡೇತರ ನಾಮಫಲಕ ತೆರವಿಗೆ ತುಳುನಾಡಿನಲ್ಲಿ ವಿರೋಧ : ಯಾವುದೇ ಬೋರ್ಡ್​ ಮುಟ್ಟದಂತೆ ಎಚ್ಚರಿಕೆ Read More »

ಐದು ತಲೆಮಾರು ಕಂಡ ಬೈಲೂರಿನ ಮಾಡ ಕುಟುಂಬ

ಮಗುವಿನ ನಾಮಕರಣದ ವಿಶಿಷ್ಟ ಕಾರ್ಯಕ್ರಮ ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಐದು ತಲೆಮಾರಿನ ತನಕ ಬದುಕುಳಿಯುವುದು ಬಹಳ ಅಪರೂಪವಾಗಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕುಟುಂಬಗಳಿಗೆ ಮಾತ್ರ ಐದನೇ ಪೀಳಿಗೆಯನ್ನು ಕಾಣುವ ಭಾಗ್ಯ ಸಿಗುತ್ತದೆ. ಯೋಗಾನುಯೋಗ ಎಂಬಂತೆ ಇಂಥ ಒಂದು ಕುಟುಂಬ ಈಗ ಬೈಲೂರಿನಲ್ಲಿದೆ. ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಪ್ರತಿಷ್ಠಿತ ಮಾಡ ಮನೆತನದ ಅವಿಭಕ್ತ ಕುಟುಂಬಕ್ಕೀಗ ಐದನೇ ತಲೆಮಾರು ಕಂಡ ಸಂಭ್ರಮ-ಸಡಗರ. ಕೃಷಿಕ ಕುಟುಂಬವಾದ ದಿ. ಅಬ್ಬಣ್ಣ ಮಾಡ ಮತ್ತು ಶಾಂತ ಮಾಡ ಅವರಿಗೆ ಐವರು ಮಕ್ಕಳು.

ಐದು ತಲೆಮಾರು ಕಂಡ ಬೈಲೂರಿನ ಮಾಡ ಕುಟುಂಬ Read More »

ರಾಮೇಶ್ವರಂ ಕೆಫೆ ಬಾಂಬ್ ಕೇಸ್ : ಶಂಕಿತನಿಗಾಗಿ ತುಮಕೂರು, ಬಳ್ಳಾರಿಯಲ್ಲಿ ಎನ್‌ಐಎ ಶೋಧ

ತುಮಕೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬಾಂಬರ್‌ ತುಮಕೂರಿನಲ್ಲಿ ಓಡಾಡಿದ್ದ ಎಂಬ ಅನುಮಾನ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಂಕಿತ ಬಾಂಬರ್‌ ಮಾರ್ಚ್‌ 1ರಂದು ತುಮಕೂರಿನಲ್ಲಿ ಓಡಾಡಿದ್ದ ಎಂಬ ಶಂಕೆ ಹಿನ್ನೆಲೆಯಲ್ಲಿ ಆತನ ಸುಳಿವಿಗಾಗಿ ತುಮಕೂರಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾ. 6ರಂದು ರಾತ್ರಿ ಇಬ್ಬರು ಡಿಸಿಪಿ ನೇತೃತ್ವದಲ್ಲಿ 28 ವಾಹನಗಳಲ್ಲಿ ಆಗಮಿಸಿದ ಪೊಲೀಸರು ತುಮಕೂರಿನ ರೈಲ್ವೆ ನಿಲ್ದಾಣ, ಮಂಡಿಪೇಟೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಶಂಕಿತನ ಹೆಜ್ಜೆ

ರಾಮೇಶ್ವರಂ ಕೆಫೆ ಬಾಂಬ್ ಕೇಸ್ : ಶಂಕಿತನಿಗಾಗಿ ತುಮಕೂರು, ಬಳ್ಳಾರಿಯಲ್ಲಿ ಎನ್‌ಐಎ ಶೋಧ Read More »

ಮಾ. 9 : ಆನೆಕೆರೆ ಬಸದಿ ಮಂಡಲ ಪೂಜಾ ಮಹೋತ್ಸವ

ಕಾರ್ಕಳ : ಆನೆಕೆರೆ ಚತುರ್ಮುಖ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಮಂಡಲ ಪೂಜಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಮಾ. 9ರಂದು ಜರುಗಲಿದೆ.ಬೆಳಿಗ್ಗೆ 11ಕ್ಕೆ ಮುಖವಸ್ತ್ರ ಉದ್ಘಾಟನೆ, ನಂತರ ಸ್ವಾಮಿಗೆ ನವಕಲಶ ಅಭಿಷೇಕ ಹಾಗೂ ಮೇಗಿನನೆಲೆಯಲ್ಲಿ ಕ್ಷೀರಾಭಿಷೇಕ, ಕ್ಷೇತ್ರಪಾಲ ಮತ್ತು ನಾಗ ಸನ್ನಿಧಿಯಲ್ಲಿ ಕ್ಷೀರಾಭಿಷೇಕ ಮತ್ತು ಮಹಾಪೂಜೆ, ಧರ್ಮದೇವತೆಗಳ ಸಾನಿಧ್ಯದಲ್ಲಿ ಪನಿವಾರ ಪೂಜೆ ಮತ್ತು ಮಹಾಮಂಗಳಾರತಿ, ಮಧ್ಯಾಹ್ನ 3ರಿಂದ ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಭಕ್ತಾಮರ ಆರಾಧನೆ, ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಜ್ರಪಂಜರ ಯಂತ್ರ

ಮಾ. 9 : ಆನೆಕೆರೆ ಬಸದಿ ಮಂಡಲ ಪೂಜಾ ಮಹೋತ್ಸವ Read More »

error: Content is protected !!
Scroll to Top