ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ನೆಲ್ಲಿಗುಡ್ಡೆ – ನೋಟ್ ಬುಕ್ ವಿತರಣೆ, ಭಜನಾ ತರಬೇತಿ ಉದ್ಘಾಟನೆ, ಪ್ರತಿಭಾ ಪುರಸ್ಕಾರ

ಕಾರ್ಕಳ : ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ನೆಲ್ಲಿಗುಡ್ಡೆ ಆಶ್ರಯದಲ್ಲಿ ಬಜಗೋಳಿಯ ಜ್ವಾಲ್ಲಿ ಬಾಯ್ಸ್ ತಂಡದ ವತಿಯಿಂದ ಜು.11 ರಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ ವಿತರಣೆ ಕಾರ್ಯಕ್ರಮ ಹಾಗೂ ಮಂಡಳಿಯ ವತಿಯಿಂದ ಆಯೋಜಿಸಿರುವ ಭಜನಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.

ಇದೇ ಸಂದರ್ಭ 2025-26ನೇ ಸಾಲಿನ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮಂಡಳಿಯ ವಿದ್ಯಾರ್ಥಿ ಸದಸ್ಯರನ್ನು ಅಭಿನಂದಿಸಲಾಯಿತು.

ನೆಲ್ಲಿಗುಡ್ಡೆ ಗೆಳೆಯರ ಬಳಗದ ಅಧ್ಯಕ್ಷ ಸುರೇಶ್ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಡಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಜತ್ ರಾಮ್ ಮೋಹನ್, ಕಾರ್ಕಳ ತಾಲೂಕು ಭಜನಾ ಒಕ್ಕೂಟಗಳ ಅಧ್ಯಕ್ಷ ಶ್ರೀಕಾಂತ್ ಪ್ರಭು, ಕಡಾರಿ ಯುವಕ ಮಂಡಲ ಅಧ್ಯಕ್ಷ ಗುರುಪ್ರಸಾದ್ ಪೇರಡ್ಕ, ಮಂಜು ಶ್ರೀ ಭಜನಾ ಮಂಡಳಿಯ ಕಾರ್ಯದರ್ಶಿ ಅವಿನಾಶ್ ಕುಲಾಲ್, ಜ್ವಾಲಿ ಬಾಯ್ಸ್ ತಂಡದ ಪ್ರಶಾಂತ್ ಶೆಟ್ಟಿ, ಸುದರ್ಶನ್ ರಾವ್ ಹಾಗೂ ಮಂಡಳಿಯ ಅಧ್ಯಕ್ಷೆ ಸುಚಿತ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅದ್ಯಾ ಶೆಟ್ಟಿ ಹಾಗೂ ಶ್ರುತಿ ಶೆಟ್ಟಿ ಪ್ರಾರ್ಥನೆಗೈದರು. ಸೌಮ್ಯ ಶ್ರೀ ಪ್ರಸ್ತಾವನೆಗೈದರು. ಸುಕನ್ಯಾ ಸ್ವಾಗತಿಸಿದರು. ಶ್ರೇಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಚಂದನ ಆಚಾರ್ಯ ವಂದಿಸಿದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮಂಡಳಿಯ ಕಾರ್ಯವನ್ನು ನೆರೆದ ಗಣ್ಯರು ಶ್ಲಾಘಿಸಿದರು.







































































error: Content is protected !!
Scroll to Top