ಮುಳ್ಕಾಡು ಸರಕಾರಿ ಶಾಲಾ ಕೊಠಡಿಗೆ ಶಿಲಾನ್ಯಾಸ – ಪುಣ್ಯಕೋಟಿ ವನ ಉದ್ಘಾಟನೆಎಂಆರ್‌ಪಿಎಲ್‌ನಿಂದ 25 ಲಕ್ಷ ರೂ. ಅನುದಾನ

ಹೆಬ್ರಿ : ಮುಳ್ಕಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಂಆರ್‌ಪಿಎಲ್ ವತಿಯಿಂದ ಮಂಜೂರಾದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎರಡು ಕೊಠಡಿಗಳ ಶಿಲಾನ್ಯಾಸ ಹಾಗೂ ದಾನಿಗಳ ನೆರವಿನಿಂದ ಸಾಕಾರಗೊಂಡ ಪುಣ್ಯಕೋಟಿ ವನದ ಉದ್ಘಾಟನೆ ಫೆ. 14ರಂದು ನಡೆಯಿತು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಳ್ಕಾಡು ಶಾಲೆಯ ಶೈಕ್ಷಣಿಕ ವಾತಾವರಣ, ಭೌತಿಕ ಸೌಲಭ್ಯ ಖಾಸಗಿ ಶಾಲೆಯನ್ನು ಮೀರಿಸುವಂತಿರುವುದು ಸಂತೋಷದ ವಿಚಾರ ಎಂದರು.
ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ‌ ಸುಕೇಶ್ ಹೆಗ್ಡೆ, ಎಂಆರ್‌ಪಿಎಲ್ ಹಿರಿಯ ಮ್ಯಾನೇಜರ್ ಅಶೋಕ್ ಕುಮಾರ್ ಹೆಗ್ಡೆ, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ, ಸಂಜೀವಿನಿ ಫಾರಂನ ಸವಿತಾ ರಾಮಕೃಷ್ಣ ಆಚಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ‌ ಸದಾಶಿವ ಪ್ರಭು, ಮುನಿಯಾಲು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸಂದೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಜನಾರ್ಧನ ಬೆಳಿರಾಯ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಪೂಜಾರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಭಾಷ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಫುಲ್ಲ ವಂದಿಸಿದರು. ಊರಿನ ಹಿರಿಯ ಪ್ರಮೋದ್ ಕುಮಾರ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಸಂಜೀವ ಪೂಜಾರಿ, ವಿಶ್ವನಾಥ ನಾಯಕ್, ಪ್ರಕಾಶ್ ನಾಯಕ್, ಕೇಶವ ನಾಯಕ್, ಕೌಶಿಕ್ ಆಚಾರ್ಯ ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ನಿಶಾ ಶೆಟ್ಟಿ, ರೂಪ, ಎಸ್ಟಿಎಂಸಿ ಸದಸ್ಯರು, ಪೋಷಕರು ಸಹಕರಿಸಿದರು.































































































error: Content is protected !!
Scroll to Top