ಡಿ. 25-27 : ತೆಳ್ಳಾರು ಹಂಪೆದೊಟ್ಟು ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ವರ್ಷಾವಧಿ ನೇಮೋತ್ಸವ

ಕಾರ್ಕಳ : ತೆಳ್ಳಾರು ಹಂಪೆದೊಟ್ಟು ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ ಡಿ. 25 ರಿಂದ 27 ರವರೆಗೆ ಜರಗಲಿದೆ.

ಡಿ. 25ರ ಗುರುವಾರ ಮಧ್ಯಾಹ್ನ 2 ಗಂಟೆಗೆ ತೆಳ್ಳಾರು ಗುತ್ತು ಮತ್ತು ಮಾಂಜ ಬರ್ಕೆಯಿಂದ ಶ್ರೀ ದೈವಗಳ ಭಂಡಾರ ಹೊರಡುವುದು. ಹಂಪೆದೊಟ್ಟು ದೇವಸ್ಥಾನ ಮತ್ತು ಗರಡಿಯಲ್ಲಿ ತೋರಣ ಮುಹೂರ್ತ, ಭಂಡಾರ ಸ್ಥಾಪನೆ, ಪಂಚವಿಂಶತಿ ಕಲಾಭಿಷೇಕ, ವಾಸ್ಸತುಬಲಿ, ಸುದರ್ಶನ ಹೋಮ, ಪನಿವಾರ ಸೇವೆ, ಧ್ವಜಾರೋಹಣ, ಪಲ್ಲಪೂಜೆ ನಡೆಯಲಿದೆ. ಸಂಜೆ ಗಂಟೆ 6.30 ರಿಂದ ಶ್ರೀ ಧರ್ಮರಸು ದೈವದ ಗಗ್ಗರ ಸೇವೆ, ರಾತ್ರಿ 8ರಿಂದ ಅನ್ನಪ್ರಸಾದ ನಡೆಯಲಿದೆ. 8 ಗಂಟೆಗೆ, ಹೂವಿನ ಪೂಜೆ, 8.30ಕ್ಕೆ ದೈವದ ಉತ್ಸವ ಬಲಿ, 10.30ರಿಂದ ಶ್ರಿ ಕೊಡಮಣಿತ್ತಾಯ ನೇಮೋತ್ಸವ ಜರಗಲಿದೆ.

ಡಿ. 26ರ ಶುಕ್ರವಾರ ಸಂಜೆ 4 ಗಂಟೆಗೆ ಸಾರ್ವಜನಿಕ ಶನಿಪೂಜೆ, 6.30ರಿಂದ ಶ್ರೀ ಕೊಡಮಣಿತ್ತಾಯ ಹೂವಿನ ಪೂಜೆ, ರಾತ್ರಿ 7 ಗಂಟೆಯಿಂದ ಶ್ರೀ ದೈವದ ಉತ್ಸವ ಬಲಿ, ರಾತ್ರಿ 8ರಿಂದ ಅನ್ನಸಂಪರ್ಪಣೆ, 9ಗಂಟೆಯಿಂದ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ.
ಡಿ.27 ಶನಿವಾರದಂದು ಬೆಳಿಗ್ಗೆ 9 ಗಂಟೆಯಿಂದ ಮಾಯಿಂದಾಲ ದೈವ ನೇಮ ಜರುಗಲಿದೆ.























































































































error: Content is protected !!
Scroll to Top