ನ. 26 – 28 : ಯಕ್ಷರಂಗಾಯಣ ಕಾರ್ಕಳ – ನಾಟಕೋತ್ಸವ

ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಇದರ ವತಿಯಿಂದ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರಿಂದ ನ. 26ರಿಂದ 28ರವರೆಗೆ ಕೋಟಿ ಚೆನ್ನಯ ಥೀಮ್‌ ಆವರಣದ ಬಯಲು ರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಾಟಕೋತ್ಸವ ನಡೆಯಲಿದೆ.

ಉದ್ಘಾಟನೆ
ನ. 26ರಂದು ಸಂಜೆ 6.15ಕ್ಕೆ ಶಾಸಕ ವಿ. ಸುನಿಲ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರಾವಳಿ ಅಭಿವೃದ್ಧಿ ಮಂಡಳಿ ಮಂಗಳೂರು ಇದರ ಅಧ್ಯಕ್ಷ ಎಂ.ಎ. ಗಫೂರ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಯಕ್ಷರಂಗಾಯಣ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ನಾಟಕ
ನ. 26ರಂದು ಗುಲಾಮನ ಸ್ವಾತಂತ್ರ್ಯ ಯಾತ್ರೆ ನಡೆಯಲಿದ್ದು, ಇದರ ಮೂಲ ರಚನೆಕಾರ ತೌಫಿಕ್‌ ಅಲ್‌ ಹಕೀಮ್‌, ಎಂ.ಎಸ್.‌ಕೆ. ಪ್ರಭು ಕನ್ನಡಕ್ಕೆ ಅನುವಾದಿಸಿದ್ದು, ಭಿನ್ನಷಡ್ಜ ಅವರಿಂದ ಸಂಗೀತ, ಬಿ. ಆರ್.‌ ವೆಂಕಟರಮಣ ಐತಾಳ ನಿರ್ದೇಶಿಸಿದ್ದಾರೆ. ನ. 27ರಂದು ಡಾ. ಕೆ. ಶಿವರಾಮ ಕಾರಂತ ಅವರ ರಚನೆಯ ಸೋಮಿಯ ಸೌಭಾಗ್ಯ ನಾಟಕ ಪ್ರದರ್ಶನಗೊಳ್ಳಲಿದ್ದು, ಬಿನ್ನಷಡ್ಜ ಸಂಗೀತ, ಗಣೇಶ್‌ ಮಂದಾರ್ತಿ ನಿರ್ದೇಶಿಸಿದ್ದಾರೆ. ನ. 28ರಂದು ಮಹಾತ್ಮರ ಬರವಿಗಾಗಿ ನಾಟಕ ನಡೆಯಲಿದ್ದು ಇದರ ಮೂಲ ರಚನೆಕಾರ ಆರ್.‌ಕೆ. ನಾರಾಯಣ್‌, ಚಿ.ನ. ಮಂಗಳ ಕನ್ನಡಕ್ಕೆ ಅನುವಾದಿಸಿದ್ದು ಶ್ರೀಕಾಂತ್‌ ಎನ್‌.ವಿ. ನಿರ್ದೇಶಿಸಿದ್ದಾರೆ.



































































































error: Content is protected !!
Scroll to Top