ಕೆನರಾ ಬ್ಯಾಂಕ್ ಮುನಿಯಾಲು – ನವೀಕೃತ ಕಟ್ಟಡ ಉದ್ಘಾಟನೆ

ಕಾರ್ಕಳ : ಕೆನರಾ ಬ್ಯಾಂಕ್ ಮುನಿಯಾಲು ಶಾಖೆಯ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ ನ. 19ರಂದು ನಡೆಯಿತು. ಇದೇ ಸಂದರ್ಭ ಕೆನರಾ ಬ್ಯಾಂಕ್ ಸ್ಥಾಪಕರಾದ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ 173 ನೇ ಹುಟ್ಟು ಹಬ್ಬವನ್ನು ಶಾಖೆಯಲ್ಲಿ ಆಚರಿಸಲಾಯಿತು. ನವೀಕೃತ ಶಾಖೆಯ ಉದ್ಘಾಟನೆಯನ್ನು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಶ್ರೀಧರ್ ಪೈ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಡಿ.ಜಿ.ಎಮ್ ರಾಮ ಮೂರ್ತಿ, ಕಟ್ಟಡ ಮಾಲಕರಾದ ಎಮ್. ದಿನೇಶ್ ಪೈ, ತಿರುಮಲ ಕ್ಯಾಶೂಸ್ ಕಡ್ತಲ ಇದರ ಮಾಲಕ ಯೋಗೀಶ್ ಮಲ್ಯ, ಮಂಗಳ ಕ್ಯಾಶೂಸ್ ವರಂಗ ಇದರ ಮಾಲಕ ನರಸಿಂಹ ಮಲ್ಯ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಬೇಬಿ ಶೆಟ್ಟಿ ಹಾಗೂ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ ಉಪಸ್ಥಿತರಿದ್ದರು. ಶಾಖಾ ಪ್ರಬಂಧಕ ಅಶೋಕ್ ಟಿ. ಜಿ. ಸ್ವಾಗತಿಸಿ, ಶಾಖಾ ಸಿಬ್ಬಂದಿ ಪದ್ಮಶ್ರೀ ವಂದಿಸಿದರು.























































































































error: Content is protected !!
Scroll to Top