ಕಾರ್ಕಳ : ಕೋಟಿಗಟ್ಟಲೆ ರೂ. ಮೌಲ್ಯದ ಪಟಾಕಿ ಅಕ್ರಮವಾಗಿ ದಾಸ್ತಾನಿರಿಸಿದ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿಯ ಮನೆಗೆ ಕಾರ್ಕಳ ನಗರ ಠಾಣೆ ಪೊಲೀಸರು ಅ.15ರ ರಾತ್ರಿ ದಾಳಿ ನಡೆಸಿದ್ದಾರೆ. ಸತ್ಯೇಂದ್ರ ನಾಯಕ್ ಎಂಬವರಿಗೆ ಸೇರಿದ ಹಳೆ ಮನೆಯಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಪತ್ತೆಯಾಗಿದ್ದು ಪತ್ತೆಯಾಗಿದೆ. ದೀಪಾವಳಿಗೆ ಪಟಾಕಿ ಮಾರಾಟ ಮಾಡುವ ನಿಟ್ಟಿನಲ್ಲಿ ರಮಾನಂದ ನಾಯಕ್ ಎಂಬವರು ತಮಿಳುನಾಡಿನ ಶಿವಕಾಶಿ ಎಂಬಲ್ಲಿಂದ ಈ ಬೃಹತ್ ಪ್ರಮಾಣದ ಪಟಾಕಿ ತರಿಸಿದ್ದರು ಎನ್ನಲಾಗಿದೆ. ಕಾರ್ಕಳ ಉಪವಿಭಾಗದ ಎಎಸ್‌ಪಿ ಡಾ. ಹರ್ಷಪ್ರಿಯಾಂವದ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.






































