ಕಾರ್ಕಳ : ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿದ್ಯಾರ್ಥಿಗಳು ನಿಟ್ಟೆಯ ಪರ್ಪಲೆಯಲ್ಲಿರುವ ಕ್ರಿಸ್ತ ಸೇವಕಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಇದೇ ಸಂದರ್ಭ ಆಶ್ರಮದ ನಿವಾಸಿಗಳಿಗೆ ವಿದ್ಯಾರ್ಥಿಗಳು ತಂದ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು. ಸಂಸ್ಥೆಯ ಉಪಪ್ರಾಂಶುಪಾಲ ಸಾಹಿತ್ಯ, ಘಟಕಾಧಿಕಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕ ಶೈಲೇಶ್, ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು, ಆಂಗ್ಲ ಭಾಷಾ ಉಪನ್ಯಾಸಕಿ ಕೀರ್ತಿ ಆಚಾರ್ಯ, ಹಿಂದಿ ಉಪನ್ಯಾಸಕಿ ಅಶ್ವಿನಿ, ಕ್ಷೇಮಪಾಲಕರಾದ ಸುಕೇಶ್, ಮಂಜುನಾಥ್, ಚಾಲಕರಾದ ಚಂದ್ರಶೇಖರ್ ಮತ್ತು ಅಕ್ಷಯ್‌ಕುಮಾರ್ ಉಪಸ್ಥಿತರಿದ್ದರು.
ಜ್ಞಾನಸುಧಾ ವಿದ್ಯಾರ್ಥಿಗಳಿಂದ ಕ್ರಿಸ್ತ ಸೇವಕಿ ಆಶ್ರಮ ಭೇಟಿ









