ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ – ಕಾರ್ಯದರ್ಶಿಯಾಗಿ ಅನೀಶ್ ತೆಂಡೂಲ್ಕರ್
ಕಾರ್ಕಳ : ಸಿವಿಲ್ ಇಂಜಿನೀಯರ್ಸ್ ಅಸೋಸಿಯೇಷನ್ ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಮಾಳ ಅನೀಶ್ ತೆಂಡೂಲ್ಕರ್ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೊಟೇಲ್ ಪ್ರಕಾಶ್‌ನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉಪಾಧ್ಯಕ್ಷರಾಗಿ ರಾಕೇಶ್ ಅಮೀನ್ ಸಾಣೂರು ಹಾಗೂ ಜೋಯಲ್ ಮತಾಯಸ್, ಕೋಶಾಧಿಕಾರಿ ಸುಕೇಶ್ ಎ., ಜೊತೆ ಕಾರ್ಯದರ್ಶಿಯಾಗಿ ರೋಹನ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ, ತಾಂತ್ರಿಕ ಕಾರ್ಯದರ್ಶಿಯಾಗಿ ಸುಜಿತ್ ಶೆಟ್ಟಿ, ಗೌರವ ಸಲಹೆಗಾರರಾಗಿ ಶ್ರೀನಿವಾಸ್ ಜಿ.ಕೆ. ಪೈ, ಶಶಿಕಾಂತ್ ರೈ, ಅರುಣ್ ಕುಮಾರ್ ಶೆಟ್ಟಿ, ಎನ್. ಎಂ. ಹೆಗ್ಡೆ, ಕಾನೂನು ಸಲಹೆಗಾರರಾಗಿ ಐ.ಆರ್. ಬಲ್ಲಾಳ್, ಲೆಕ್ಕಪರಿಶೋಧಕ ಪ್ರಭಾತ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ.
ಪದಪ್ರದಾನ
ಅ. 5ರ ರವಿವಾರ ಹೊಟೇಲ್ ಬಾಲಾಜಿ ಇನ್‌ನಲ್ಲಿ ಸಂಜೆ 6:30ಕ್ಕೆ ಪದಪ್ರದಾನ ಸಮಾರಂಭ ನಡೆಯಲಿದೆ. ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಪ್ರಕಾಶ್ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ವಿಮಲ್ ಅನಿಲ್ ಸ್ಟ್ರಕ್ಚರಲ್ ಮತ್ತು ಸರ್ವೆ ಕನ್ಸಲ್ಟೆಂಟ್ ಅನಿಲ್ ಹೆಗ್ಡೆ, ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ, ಅರುಣ್ ಕುಮಾರ್ ನಿಟ್ಟೆ, ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಅಲ್ಟ್ರಾಟೆಕ್ ಸಿಮೆಂಟ್ ಮಂಗಳೂರು ಇದರ ಸೇಲ್ಸ್ ಹೆಡ್ ಮೋಹನ್ ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಲಯನ್ಸ್ ಮಾಜಿ ಗವರ್ನರ್ ಎನ್. ಎಂ. ಹೆಗ್ಡೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























































