ಕಾರ್ಕಳ : ಸೆ. 9 ರಂದು ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭಗೊಂಡ ಜೇಸಿ ಸಪ್ತಾಹ ಸೆ. 15ರಂದು ಕುಟುಂಬ ಸಮ್ಮಿಲನದೊಂದಿಗೆ ಸಮಾಪನಗೊಂಡಿತು. ಉದ್ಯಮಿ ವಿಜಯ ಶೆಟ್ಟಿ ಕಾರ್ಯಕ್ರಮಕ್ಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜೇಸಿಐ ಕಾರ್ಕಳದಿಂದ ವ್ಯಕ್ತಿತ್ವ ನಿರ್ಮಾಣದೊಂದಿಗೆ ಹತ್ತಾರು ಸಮಾಜಮುಖಿ ಕಾರ್ಯಗಳಾಗಳ ಮೂಲಕ ಗುರುತಿಸಿಕೊಂಡಿದೆ. ಇಂತಹ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಆಶಸಿದರು.
ಸನ್ಮಾನ
ಮಾರ್ಷಲ್ ಆರ್ಟ್ ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ವಿಘ್ನೇಶ್ ಅವರಿಗೆ ಇದೇ ಸಂದರ್ಭದಲ್ಲಿ ಜೇಸಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಲಯ 18 ಟೂಟಿಕೋರನ್ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿದ್ದರು.
ವೇದಿಕೆಯಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, PR & Marketing ನಿರ್ದೇಶಕ ರಾಕೇಶ್ ಹೊಸಬೆಟ್ಟು, ಜೇಸಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಪ್ರಚಿತ್ ಕುಮಾರ್, ಕಾರ್ಯಕ್ರಮ ನಿರ್ದೇಶಕ ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ರಾವ್ ಉಪಸ್ಥಿತರಿದ್ದರು. ಪೂರ್ವ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.








































