ಪ್ರೀತಿ ನಿರಾಕರಣೆ – ಯುವತಿಯನ್ನು ಇರಿದು ಕೊಲೆಗೈದ ಆರೋಪಿಯೂ ಆತ್ಮಹತ್ಯೆ

ಉಡುಪಿ : ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಯವಕನೋರ್ವ ಯುವತಿಗೆ ಇರಿದ ಘಟನೆ ಬ್ರಹ್ಮಾವರ ತಾಲೂಕು ಕೊಕ್ಕರ್ಣೆಯಲ್ಲಿ ಸೆ. 12ರ ಬೆಳಿಗ್ಗೆ ಸಂಭವಿಸಿದೆ. ಕೊಕ್ಕರ್ಣೆ ಚೆಗ್ರಿಬೆಟ್ಟು ನಿವಾಸಿ ಕಾರ್ತಿಕ್ ಪೂಜಾರಿ ತನ್ನ ನೆರೆಮನೆಯ ರಕ್ಷಿತಾ ಪೂಜಾರಿ (24) ಎಂಬಾಕೆಯನ್ನು ಚೂರಿಯಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡ ರಕ್ಷಿತಾ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲಿಸಲಾಗಿತ್ತು. ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತಾ ಮೃತಪಟ್ಟರೆಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಈ ಬಗ್ಗೆ ಆರೋಪಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಯುವಕ ಆತ್ಮಹತ್ಯೆ
ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ತಿಕ್ ಪೂಜಾರಿಯ ಮೃತದೇಹ ಅಲ್ಲೇ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

ಹುಟ್ಟಿದ ದಿನ
ಕಾರ್ತಿಕ್‌ ರಕ್ಷಿತಾಳನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ, ಆಕೆಯ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ರಕ್ಷಿತಾ ಕೂಡ ಕಾರ್ತಿಕ್‌ ನಂಬರ್‌ ಬ್ಲಾಕ್‌ ಮಾಡಿದ್ದು, ಇದರಿಂದ ಕುಪಿತಗೊಂಡ ಆತ ರಕ್ಷಿತಾ ಬೆಳಿಗ್ಗೆ ಕೆಲಸಕ್ಕೆಂದು ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬಂದು ಚಾಕುವಿನಿಂದ ಇರಿದಿದ್ದಾನೆ. ಸೆ. 12 ಆಕೆಯ ಹುಟ್ಟಿದ ದಿನವಾಗಿದ್ದು ಅಂದೇ ಜೀವ ಚೆಲ್ಲಿರುವುದು ವಿಪರ್ಯಾಸ.















































































error: Content is protected !!
Scroll to Top