ಕುಡುಕ ಗಂಡನಿಗೆ ಕಡಿದ ಮಡದಿ : ಅಪರಿಚಿತರ ಕೃತ್ಯವೆಂದು ಕಥೆ ಕಟ್ಟಿದ ಪಾತಕಿ

ಕಾರ್ಕಳ : ಗಂಡನಿಗೆ ಕತ್ತಿಯಿಂದ ಕಡಿದ ಘೋರ ಕೃತ್ಯ ಕಾರ್ಕಳ ತಾಲೂಕು ನಿಟ್ಟೆಯಿಂದ ಸೆ. 7ರಂದು ವರದಿಯಾಗಿದೆ. ನಿಟ್ಟೆ ಗ್ರಾಮದ ಪರಪ್ಪಾಡಿ ಶೇಖರ್ ಮೂಲ್ಯರಿಗೆ ಅವರ ಪತ್ನಿ ಮಾಲತಿ ಮೂಲ್ಯ ಕತ್ತಿಯಿಂದ ಕಡಿದು ಬಳಿಕ ಮಗಳಿಗೆ ಕರೆ ಮಾಡಿ ನಿಮ್ಮ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆಗೈದು ಅವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾಳೆ. ಆಕೆ ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಶೇಖರ್‌ ಮೂಲ್ಯರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆ ಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ಅನುಮಾನಗೊಂಡ ಪೊಲೀಸರು ಮಾಲತಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಸತ್ಯ ಸಂಗತಿ ಬಯಲಾಗಿದೆ. ಗಂಡ ಕುಡಿದು ಗಲಾಟೆ ಮಾಡುತ್ತಿದ್ದ ಕಾರಣ ನಾನೇ ಗಂಡನಿಗೆ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ. ಆರೋಪಿ ಮಾಲತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗಡುಕ ದಂಪತಿ
ಆರೋಪಿ ಮಾಲತಿ ಮತ್ತು ಗಾಯಾಳು ಶೇಖರ್ ಮೂಲ್ಯ ಈ ಹಿಂದೆ 2011 ರಲ್ಲಿ ನೆರೆ ಮನೆ ನಿವಾಸಿ ರಾಮಣ್ಣ ಕುಲಾಲ್ ಅವರ ಕೊಲೆ ಮಾಡಿದ್ದು, ಜೀವಾವಧಿ ಶಿಕ್ಷೆ ಅನುಭವಿಸಿ 2021 ರಲ್ಲಿ ಬಿಡುಗಡೆ ಹೊಂದಿರುತ್ತಾರೆ.















































































error: Content is protected !!
Scroll to Top