ಕಾರ್ಕಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ ಕುಕ್ಕುಂದೂರು ಇದರ 42ನೇ ವರ್ಷದ ಶ್ರೀ ಗಣೇಶೋತ್ಸವ ಸಮಾರಂಭ ಆ. 27ರಿಂದ ಆ. 31ರವರೆಗೆ ನಡೆಯಲಿದೆ.
ಆ. 27ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಷ್ಠಾಪನಾ ಪೂಜೆಯಾಗಿ 10.15 ಶ್ರೀ ದೇವರಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಣೆಯಾಗಲಿದೆ.
ಪ್ರತಿನಿತ್ಯವೂ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ಪ್ರಾತ:ಕಾಲ ಪೂಜೆ, 10 ಗಂಟೆಯಿಂದ 12 ಗಂಟೆಯವರೆಗೆ ಗಣಹೋಮ ಹಾಗೂ ಮಧ್ಯಾಹ್ನದ ಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ 8.15ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ. 27ರಂದು ಸ್ಥಳೀಯ ಪ್ರತಿಭೆಗಳು ಹಾಗೂ ಡಿ.ಪಿ. ಡ್ಯಾನ್ಸ್ ಗ್ರೂಪ್ ಕಾರ್ಕಳ ಇವರಿಂದ ನೃತ್ಯ ಸಂಭ್ರಮ, ಆ. 28ರಂದು ಮೂಲ್ಕಿ ನವ ವೈಭವ ಕಲಾವಿದರಿಂದ ಅದ್ದೂರಿ ಕಾರ್ಯಕ್ರಮ ಸತ್ಯದ ತುಡರ್, ಆ. 29ರಂದು ಪಿಂಗಾರ ಕಲಾವಿದರು ಬೆದ್ರ ಇವರಿಂದ ಅದ್ದೂರಿ ರಂಗ ವಿನ್ಯಾಸದ ಕುತೂಹಲಭರಿತ ತುಳು ಹಾಸ್ಯಮಯ ನಾಟಕ ಓಂಕಾರ ಹಾಗೂ ಆ. 30ರಂದು ಕಾಪಿಕಾಡ್, ಪಡೀಲ್, ವಾಮಂಜೂರು, ಸಾಯಿ ಅಭಿನಯದ ಚಾಪರ್ಕ ಕಲಾವಿದರಿಂದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್‌ರವರ ತುಳು ಹಾಸ್ಯಮಯ ನಾಟಕ ಪುದರ್ ದೀತಿಜಿ ಪ್ರದರ್ಶನಗೊಳ್ಳಲಿದೆ.
ಆ. 31ರಂದು ಸಂಜೆ 6.30ಕ್ಕೆ ಮಹಾಪೂಜೆಯಾಗಿ ವಿಸರ್ಜನ ಪೂಜೆ ನಡೆದು ಶೋಭಯಾತ್ರೆ ನಡೆಯಲಿದೆ.



















