ಮುಡಾರು – ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ

ಉಡುಪಿ : ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ದಿಡಿಂಬಿರಿ ಕ್ರಾಸ್ ನಿಂದ ರಾಮೇರಗುತ್ತುವರೆಗೆ ಹೋಗುವ ರಸ್ತೆಯಲ್ಲಿ (ಕೊಪ್ಪಲ ಕ್ರಾಸ್‌ನಿಂದ ರಾಮೇರಗುತ್ತುವರೆಗೆ) ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇಲ್ಲಿನ ಸೇತುವೆಯ ಸ್ಲ್ಯಾಬ್ ಕಾಮಗಾರಿ ಮುಗಿದಿದ್ದು, ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಸಾರ್ವಜನಿಕ ಸಂಚಾರಕ್ಕೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿಕೊಡಲಾಗಿದ್ದು, ಭಾರೀ ಮಳೆಯಿಂದಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ತಡೆಗೋಡೆಯ ಕಾಮಗಾರಿಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಜುಲೈ 28 ರಿಂದ ಆಗಸ್ಟ್ 30ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕಾರ್ಕಳದಿಂದ ರಾಮೇರಗುತ್ತು – ಕೆರ್ವಾಶೆ ಕಡೆ ಹೋಗುವ ವಾಹನಗಳು ಕುಂಟಿಬೈಲು ದೇವಸ್ಥಾನ ದ್ವಾರದ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ. ಬಜಗೋಳಿಯಿಂದ ಕೆರ್ವಾಶೆ ಕಡೆಗೆ ಸಾಗುವ ಘನ ವಾಹನಗಳು ಹಡ್ಯಾಲು ಕ್ರಾಸ್ ಮೂಲಕ ಮುಡ್ರಾಲು ಮಾರ್ಗವಾಗಿ ಕೆರ್ವಾಶೆಗೆ ಸಂಚರಿಸಬಹುದಾಗಿದೆ. ದಿಡಿಂಬಿರಿಯಿಂದ ಕೊಪ್ಪಲ ರಸ್ತೆಯಲ್ಲಿ ಕಿರಿದಾದ ಸೇತುವೆ ಇರುವುದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಮಾತ್ರ ಸೇತುವೆಯಲ್ಲಿ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































































































error: Content is protected !!
Scroll to Top