ಕಾರ್ಕಳ : ಮಾರ್ಕೆಟ್ ರಸ್ತೆಯ ತಿರುವಿನಲ್ಲಿ ಜನಾರ್ಧನ ಕಾಂಪ್ಲೆಕ್ಸ್ ಮುಂಭಾಗ ಮಾವಿನ ಮರವೊಂದು ವಾಲಿದ ಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭ ನೆಲಕ್ಕುರುಳುವ ಸಾಧ್ಯತೆ ಇದೆ. ಮರದ ಸಮೀಪದಲ್ಲೇ ವಿದ್ಯುತ್ ಕಂಬವಿದ್ದು ಒಂದು ವೇಳೆ ಮರ ಅಥವಾ ಅದರ ಕೊಂಬೆ ಮುರಿದು ಬಿದ್ದಲ್ಲಿ ಭಾರೀ ಅನಾಹುತ ಸಂಭವಿಸಲಿದೆ. ಇನ್ನು ವಿದ್ಯುತ್ ಕಂಬದ ಸುತ್ತ ಗಿಡಗಂಟಿಗಳೂ ಹರಡಿಕೊಂಡಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಬೈಕ್ ಸವಾರರು, ಪಾದಾಚಾರಿಗಳು ಓಡಾಡುತ್ತಿರುತ್ತಾರೆ. ಮಳೆ ಬಂದಾಗ ವಿದ್ಯುತ್ ಕಂಬದ ಬಳಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಇಲ್ಲಿನದ್ದು. ಅನಾಹುತ ಸಂಭವಿಸುವ ಮುಂಚೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರವನ್ನು ತೆರವುಗೊಳಿಸುವುದು ಸೂಕ್ತ. ಕಾರ್ಕಳ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ಪರಿಸರದಲ್ಲೇ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ಸಂಬಂಧಪಟ್ಟ ಅಧಿಕಾರಿಗಳಿಗೆ ಗೋಚರಿಸದೇ ಇರುವುದು ವಿಪರ್ಯಾಸ. ಅನಾಹುತ ಸಂಭವಿಸುವ ಮುಂಚೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.
ಅಪಾಯಕಾರಿ ಸ್ಥಿತಿಯಲ್ಲಿದೆ ಮಾರ್ಕೆಟ್ ರಸ್ತೆ ಬದಿಯಲ್ಲಿನ ಮರ



























































