ಕಾರ್ಕಳ : ಕೊಳಕ್ಕೆ ಇರ್ವತ್ತೂರು ಬಗಲ್ತಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜು.8ರಂದು ಚಿತ್ರಕಲಾ ತರಗತಿ ಪ್ರಾರಂಭಗೊಂಡಿತು. ಪಂಚಾಯತ್ ಅಧ್ಯಕ್ಷ ಭರತ್ ಕುಮಾರ್ ಜೈನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರಕಲಾ ಶಿಕ್ಷಕ ಸೂರ್ಯ ಪುರೋಹಿತ್, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಎಸ್. ಪೂಜಾರಿ, ಹಿರಿಯರಾದ ಸುಧಾಕರ ಶೆಟ್ಟಿ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.
ಬಗಲ್ತಕಟ್ಟೆ ಶಾಲೆಯಲ್ಲಿ ಚಿತ್ರಕಲಾ ತರಗತಿ ಪ್ರಾರಂಭ



























































