ಕಾರು ಮಾರಾಟ – ದಾಖಲೆ ಪತ್ರ ನೀಡದೆ ವಂಚನೆ : ದೂರು ದಾಖಲು

ಕಾರ್ಕಳ : ಕಾರು ಮಾರಾಟದ ಸಂದರ್ಭ ದಾಖಲೆ ಪತ್ರ ನೀಡದೆ ವ್ಯಕ್ತಿಯೊರ್ವರಿಗೆ ವಂಚನೆ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಯ್ಯಾರು ಗ್ರಾಮದ ರಿಜ್ವಾನ್‌ ವಂಚನೆಗೊಳಗಾದವರು. ಇವರಿಗೆ ಆರೋಪಿ ಗಿರೀಶ್‌ (ಮಂಜುನಾಥ ನಾರಾಯಣ) ಎಂಬವರು ಕೆಎ12ಎಮ್‌‌ಸಿ 3049ನೇ ನಂಬ್ರದ ಕಾರನ್ನು 10,00,000 ರೂ.ಗೆ ಮಾರಾಟ ಮಾಡಿದ್ದು, ರಿಜ್ವಾನ್‌ 4,56,500 ರೂ. ಹಣವನ್ನು ಆನ್‌ಲೈನ್ ಮೂಲಕ ಹಾಗೂ 56,500 ರೂ. ನಗದಾಗಿ ಒಟ್ಟು 5,13,000 ರೂ. ಹಣ ನೀಡಿರುತ್ತಾರೆ. ಉಳಿದ ಹಣವನ್ನು ಕಾರಿನ ದಾಖಲೆ ಪತ್ರ ನೀಡಿದ ಬಳಿಕ ನೀಡುವಂತೆ ಗಿರೀಶ್ ಹೇಳಿರುತ್ತಾರೆ. ಆದರೆ ಆರೋಪಿಯು ಕಾರಿನ ದಾಖಲೆ ಪತ್ರವನ್ನು ನೀಡದೆ, ಪಡೆದುಕೊಂಡ ಹಣವನ್ನೂ ನೀಡದೆ ಮೋಸ ಮಾಡಿರುತ್ತಾನೆ ಎಂದು ರಿಜ್ವಾನ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.















































































error: Content is protected !!
Scroll to Top