ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಪಟ್ಟಕ್ಕೇರಿದ ಸೌತ್‌ ಆಫ್ರಿಕಾ

‌ಲಂಡನ್‌ : ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ (WTC Final) ಆಸ್ಟ್ರೇಲಿಯಾವನ್ನು ಸೋಲಿಸಿ ಸೌತ್‌ ಆಫ್ರಿಕಾ ತನ್ನ ಚೋಕರ್ಸ್‌ ಪಟ್ಟವನ್ನು ಕಳಚಿ ಚಾಂಪಿಯನ್‌ ಪಟ್ಟಕ್ಕೇರಿದೆ.

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಟ್ಟವನ್ನು ಹರಿಣಗಳ ಪಡೆ ಮುಡಿಗೇರಿಸಿಕೊಂಡಿದ್ದು, 27 ವರ್ಷಗಳ ನಂತರ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ, ಐಸಿಸಿ ಫೈನಲ್‌ನಲ್ಲಿ ಗರಿಷ್ಠ ಮೊತ್ತದ ಚೇಸಿಂಗ್ ದಾಖಲಿಸಿದ ದಾಖಲೆ ಬರೆದಿದೆ. 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ನೀಡಿದ್ದ 275 ರನ್‌ಗಳ ಸವಾಲನ್ನು ಭಾರತ ಬೆನ್ನಟ್ಟಿ ರುವುದು ಇದುವರೆಗಿನ ಗರಿಷ್ಠ ಚೇಸಿಂಗ್‌ ದಾಖಲೆ ಆಗಿದೆ.

ಚೋಕರ್ಸ್ ಪಟ್ಟ
ಸೌತ್‌ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್‌, ಟಿ 20 ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಪ್ರತಿ ಬಾರಿಯೂ ಸೋಲು ಕಾಣುತ್ತಿತ್ತು. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿತ್ತು. ಇದೀಗ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಪಡೆಯುವ ಮೂಲಕ ಚೋಕರ್ಸ್ ಪಟ್ಟದಿಂದ ಮುಕ್ತವಾಗಿದೆ.



































































































error: Content is protected !!
Scroll to Top