ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಕಳದ ಡಾ. ಜಿ. ಕೆ. ಪ್ರಭು ನೇಮಕ

ಉಡುಪಿ : ಬೆಂಗಳೂರಿನ ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ನ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ಗೋಪಾಲಕೃಷ್ಣ ಪ್ರಭು ಅವರನ್ನು ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿದ್ದು, ಜುಲೈ 1 ರಂದು ಅಧಿಕಾರ ಸ್ವೀಕರಿಸಲಿರುವರು.

ಮೂಲತಃ ಕಾರ್ಕಳದವರಾದ ಡಾ. ಜಿ.ಕೆ. ಪ್ರಭು, ಒಂದು ವರ್ಷದಿಂದ ಎಂಇಎಂಜಿಯಲ್ಲಿ ಸಿಎಒ ಆಗಿ ಕಾರ್ಯ ನಿರ್ವಹಿಸುತ್ತಿದ್ದು, 2018ರ ಫೆಬ್ರವರಿಯಿಂದ ಜೈಪುರ ಮಣಿಪಾಲ ಯುನಿವರ್ಸಿಟಿಯ ಅಧ್ಯಕ್ಷರಾಗಿದ್ದರು. ಅವರು ಕಾರ್ಕಳ ಶ್ರೀ ಮದ್ಭುವನೇಂದ್ರ ಪ್ರೌಢಶಾಲೆ ಮತ್ತು ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಮೂರು ದಶಕಗಳಿಂದ ಮಾಹೆ ವಿ.ವಿ.ಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಲ್ಲದೇ ಸಹಕುಲಪತಿ (ತಾಂತ್ರಿಕ ಮತ್ತು ನಿರ್ವಹಣೆ), ಕುಲಸಚಿವ, ಎಂಐಟಿ ನಿರ್ದೇಶಕರಾಗಿದ್ದರು. ಪ್ರಭು ಅವರು, ಎಂಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬಯೋಮೆಡಿಕಲ್ ಎಂಜಿನಿಯರಿಂಗ್ ಸೊಸೈಟಿ ಆಫ್ ಇಂಡಿಯಾದ ಸಕ್ರಿಯ ಸದಸ್ಯರಾದ ಅವರು ಸಂಶೋಧನ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ.



































































































error: Content is protected !!
Scroll to Top