ಮಾ.7-9 : ಕಾರ್ಕಳ ಸಂಗೀತ ಮಹೋತ್ಸವ

ಕಾರ್ಕಳ : ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾ ಆಶ್ರಯದಲ್ಲಿ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ 33ನೇ ವರ್ಷದ ಕಾರ್ಕಳ ಸಂಗೀತ ಮಹೋತ್ಸವ-2025 ಮಾರ್ಚ್ 7ರಿಂದ 9ರ ತನಕ ಬಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಲಿದೆ. ಇದರೊಂದಿಗೆ ಸಂಗೀತ ಸಭಾದ ಸ್ಥಾಪಕಾಧ್ಯಕ್ಷ ದಿ.ವಿದ್ವಾನ್ ಬಿ.ಯೋಗೀಶ್ ಬಾಳಿಗಾ ಅವರ ಸ್ಮರಣಾರ್ಥ ಸ್ಥಳೀಯ ಯುವ ಕಲಾವಿದರಿಂದ ʼಕಲಾಸಾಧನಾʼ ಕಾರ್ಯಕ್ರಮ ಜರುಗಲಿದೆ.

ಮಾರ್ಚ್ 7 ರಂದು ಸಾಯಂಕಾಲ 4 ಗಂಟೆಗೆ ಕಾರ್ಕಳದ ಮಾಸ್ಟರ್ ಶ್ರೀಕರ ನಾರಾಯಣ ಉಪಾಧ್ಯಾಯ ಅವರಿಂದ ಕೊಳಲು ವಾದನ, 5ಕ್ಕೆ ಪ್ರಜ್ಞಾ ಅಡಿಗ ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, 6.30ಕ್ಕೆ ವಿದ್ವಾನ್ ಸಾಯಿವಿಘ್ನೇಶ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಲಿದೆ.
ಮಾರ್ಚ್ 8ರಂದು 3.30ಕ್ಕೆ ಸರಸ್ವತೀ ಸಂಗೀತ ಶಾಲೆ ಅನಂತಶಯನ ಇಲ್ಲಿನ ವಿದ್ಯಾರ್ಥಿಗಳಿಂದ ತಬಲಾ ವೃಂದ ವಾದನ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ ವೃಂದ ಗಾಯನ ನಡೆಯಲಿದೆ.
5 ಗಂಟೆಯಿಂದ ಓಂ ಬೊಂಗಾನೆ ಮುಂಬಯಿ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, 6.30ರಿಂದ ಹಿಂದೂಸ್ಥಾನಿ ಮತ್ತು ಕರ್ನಾಟಕ ಜುಗಲ್‍ಬಂದಿ ನಡೆಯಲಿದ್ದು, ಕೊಳಲು – ವಿದ್ವಾನ್ ವಿಜಯ್ ಗೋಪಾಲ್ ಚೆನ್ನೈ, ಸಿತಾರ್ – ಅಂಕುಶ ನಾಯಕ್ ಮಂಗಳೂರು ನುಡಿಸಲಿದ್ದಾರೆ.
ಮಾರ್ಚ್ 9ರಂದು 2.30ರಿಂದ ಶ್ವೇತಾ ನಾಯಕ್ ಶಿಷ್ಯರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, 4 ಗಂಟೆಗೆ ದಯಾಕರ ಭಟ್ ಮಂಗಳೂರು ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, 5 ಗಂಟೆಗೆ ಮಹಾಲಕ್ಷ್ಮಿ ಶೆಣೈ ಕಾರ್ಕಳ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, ರಾತ್ರಿ 7ರಿಂದ ದಿ.ಉಸ್ತಾದ್ ಝಾಕೀರ್ ಹುಸೈನ್ ಸ್ಮರಣಾರ್ಥ ನಡೆಯಲಿರುವ ʼಶ್ರದ್ಧಾ ಸುಮನ್ʼ ತಬ್ಲಾ ಜುಗಲಬಂದಿಯಲ್ಲಿ ಪಂ. ರಾಮಕುಮಾರ ಮಿಶ್ರ ಹಾಗೂ ರಾಹುಲ ಕುಮಾರ ಮಿಶ್ರ ನವದೆಹಲಿ, ಸಹ ಕಲಾವಿದರಾಗಿ
ವಿಜು ಆನಂದ್ ಕೇರಳ, ಮಹತಿ ಕೆ. ಕಾರ್ಕಳ-ವಯೊಲಿನ್, ಮೃದಂಗದಲ್ಲಿ ನಿಶ್ಷಿತ್ ಟಿ. ಪುತ್ತೂರು ಮತ್ತು ವಾದಿರಾಜ ಭಟ್ ಬೆಂಗಳೂರು, ಕಂಜೀರದಲ್ಲಿ ವಿ.ವ್ಯಾಸ ವಿಠ್ಠಲ ಬೆಂಗಳೂರು, ಹಾರ್ಮೋನಿಯಂಯಲ್ಲಿ ಸತ್ವಿಜಯ ಭಟ್ ಕಟಪಾಡಿ, ವಿಶ್ವನಾಥ ಭಟ್ ಕಾರ್ಕಳ, ಪ್ರಸಾದ್ ಕಾಮತ್ ಉಡುಪಿ ಮತ್ತು ಸಂಪ್ರೀತ್ ಶೆಣೈ ಉಡುಪಿ, ತಬಲಾದಲ್ಲಿ ಹೇಮಂತ ಜೋಷಿ ಧಾರವಾಡ, ದೀಪಕ್ ನಾಯಕ್ ಉಡುಪಿ, ರಾಜೇಶ್ ಭಾಗವತ ಮಂಗಳೂರು, ಶ್ರೀವತ್ಸ ಶರ್ಮ ಪಡುಬಿದ್ರಿ ಇರಲಿದ್ದಾರೆ ಎಂದು ಶಾಸ್ತ್ರೀಯ ಸಂಗೀತ ಸಪಾದ ಅಧ್ಯಕ್ಷ ಎಸ್. ನಿತ್ಯಾನಂದ ಪೈ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಪ್ರಕಾಶ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



































































































error: Content is protected !!
Scroll to Top