ಒಣಗಿದ ಅಡಿಕೆ ಮರ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು

ಹೆಬ್ರಿ : ಒಣಗಿದ ಅಡಿಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಅಡಿಕೆ ಮರ ತಲೆ ಮೇಲೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವರಂಗದಲ್ಲಿ ಸಂಭವಿಸಿದೆ. ರಾಮ (62) ಮೃತ ದುರ್ದೈವಿ. ಫೆ. 4ರಂದು ಮದ್ಯಾಹ್ನ 12 ಗಂಟೆಗೆ ಕಟ್ಟಿಗೆ ಸಲುವಾಗಿ ವರಂಗ ಗ್ರಾಮದ ಮೂಡುಕುಡೂರು ಕೆಳಗಿನ ಮನೆಯ ತೋಟದಲ್ಲಿರುವ ಒಣಗಿದ ಅಡಿಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಒಣಗಿದ ಅಡಿಕೆ ಮರವು ತುಂಡಾಗಿ ರಾಮ ಅವರ ತಲೆಯ ಮೇಲೆ ಬಿದ್ದಿರುತ್ತದೆ. ಗಾಯಗೊಂಡಿದ್ದ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮ ಅವರು ಚಿಕಿತ್ಸೆ ಸ್ಪಂದಿಸದ ಕಾರಣ ಅವರನ್ನು ಕರೆದುಕೊಂಡು ಹೋಗುವಂತೆ ವೈದ್ಯಾಧಿಕಾರಿಗಳು ಫೆ.6ರಂದು ತಿಳಿಸಿದ್ದು ಅದರಂತೆ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬರುವಾಗ ಯಾವುದೇ ರೀತಿ ಸ್ಪಂದನೆ ಇರದ ಕಾರಣ ಅನುಮಾನಗೊಂಡು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ತೋರಿಸಿದಾಗ ವೈದ್ಯರು ಪರೀಕ್ಷಿಸಿ ರಾಮ ಅವರು ದಾರಿ ಮದ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

































































































error: Content is protected !!
Scroll to Top