ಕಾರ್ಕಳ : ಶ್ರೀ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಹಾಗು ಪದಗ್ರಹಣ ಕಾರ್ಯಕ್ರಮ ಜ. 12 ರಂದು ರೆಂಜಾಳದಲ್ಲಿ ನಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್. ಸಿ. ಶ್ರೀನಿವಾಸ ಆಚಾರ್ಯ ವಹಿಸಿದ್ದರು.
ಮುಖ್ಯ ಅತಿಥಿಯಾದ ಭಾಗವಹಿಸಿದ ನೂರಾಳ್ ಬೆಟ್ಟು ಯಕ್ಷ ತೀರ್ಥ ಕಲಾ ಸೇವೆಯ ಸದಾನಂದ ಎಸ್. ಆಚಾರ್ಯ ಮಾತನಾಡಿ ಯುವಕರು ಸಮಾಜದ ಮೇಲೆ ವಿಶ್ವಾಸದಿಂದ ಸಂಘಟಿತರಾಗಬೇಕು ಎಂದ ಅವರು ಸಂಘದ ಏಳಿಗೆಯ ಕುರಿತಾಗಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ನೂತನ ಪದಾಧಿಕಾರಿಗಳು
ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರನ್ನಾಗಿ ಹರೀಶ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಪವನ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕರಿಯಾಗಿ ನವೀನ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅಕ್ಷಯ್ ಆಚಾರ್ಯ ಆಯ್ಕೆಯಾದರು. ಇದೇ ಸಂದರ್ಭ ಸಂಘಧ ಗೌರವ ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದ್ದು, ಆರ್. ಶ್ರೀನಿವಾಸ ಆಚಾರ್ಯ, ದಿನೇಶ್ ಆಚಾರ್ಯ, ಆರ್. ಸಿ. ಶ್ರೀನಿವಾಸ ಆಚಾರ್ಯ, ಆರ್. ವಿ. ಸೀತಾರಾಮ ಆಚಾರ್ಯ, ಸದಾಶಿವ ಆಚಾರ್ಯ, ಆರ್. ವಿ. ಸುಬ್ರಾಯ ಆಚಾರ್ಯ ಹಾಗೂ ಸದಾನಂದ ಆಚಾರ್ಯ ಸಮಿತಿಯ ಪಧಾದಿಕಾರಿಗಳಾಗಿ ಆಯ್ಕೆಯಾದರು.
ಸಂಘಧ ಕಾರ್ಯದರ್ಶಿ ಪವನ್ ಆಚಾರ್ಯ ಸಂಘದ ಚಟುವಟಿಕೆಯ ನಿಯಮ ಹಾಗೂ ವರದಿ ಮಂಡಿಸಿದರು. ಗ್ರಾಮ ಮೊಕ್ತೇಸರ ದಿನೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ ಆಚಾರ್ಯ ಕಾರ್ಯಕ್ರಮ ನಿರ್ವಹಿಸದರು.


































