ವಾಸ್ತುಶಿಲ್ಪಿ, ಜ್ಯೋತಿಷಿ ಗುರೂಜಿ ಉಮೇಶ್ ಆಚಾರ್ಯ ಭಾರತ ಗೌರವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಜನ್ಮಭೂಮಿ ಫೌಂಡೇಷನ್ ವತಿಯಿಂದ ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಿಶ್ವಕರ್ಮ ಸಮ್ಮೇಳನದಲ್ಲಿ ಮಂಗಳೂರಿನ
ವಾಸ್ತುಶಿಲ್ಪಿ, ಜ್ಯೋತಿಷಿ, ಬೆಂಗಳೂರು ನಾಯಂಡಳ್ಳಿ ಕಾಳಿಕಾಂಬಾ ದೇವಾಲಯದ ಧರ್ಮಾಧಿಕಾರಿ, ಮುಂಬಯಿ ಅಂಧೇರಿಯ ಮಹಾಕಾಳಿ ದೇವಾಲಯದ ಧರ್ಮದರ್ಶಿ ಗುರೂಜಿ ಉಮೇಶ್ ಆಚಾರ್ಯ ರಾಷ್ಟ್ರಮಟ್ಟದ ಭಾರತ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭೂಗರ್ಭ ಶಾಸ್ತ್ರಜ್ಞರಾದ ಗುರೂಜಿ ಉಮೇಶ್ ಆಚಾರ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಜ್ಯೋತಿಷ್ಯ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಅವರನ್ನು ವಾಸ್ತುಶಿಲ್ಪ ಮತ್ತು ಜ್ಯೋತಿಷ್ಯ ವಿಭಾಗದಲ್ಲಿ ಭಾರತ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸೆ.28ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ವಿಶ್ವಕರ್ಮ ಸಮ್ಮೇಳನದಲ್ಲಿ. ಪ್ರಶಸ್ತಿಯನ್ನು ಕೇಂದ್ರ ಸಚಿವರಾದ ವಿ ಸೋಮಣ್ಣ ಮತ್ತು ಅಜಯ್ ಟಮಟ ಪ್ರದಾನ ಮಾಡಲಿದ್ದಾರೆ. 25 ಸಾಧಕರಿಗೆ ಪ್ರಶಸ್ತಿಯನ್ನು ನೀಡಲಿದ್ದು, ಈ ಪೈಕಿ ಕರ್ನಾಟಕದ ಎಂಟು ಮಂದಿಯಿದ್ದಾರೆ. ಅವರಲ್ಲಿ ಗುರೂಜಿ ಉಮೇಶ್ ಆಚಾರ್ಯ ಒಬ್ಬರಾಗಿದ್ದಾರೆ ಎಂದು ಸಮ್ಮೇಳನದ ಆಯೋಜಕ ದಿನೇಶ್ ಕುಮಾರ್ ವಿಶ್ವಕರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top