ಬೆಳ್ಮಣ್‌ : ಆನ್‌ಲೈನ್‌ನಲ್ಲಿ 1.56 ಲಕ್ಷ ರೂ. ವಂಚನೆ – ಒಡಿಶಾದಲ್ಲಿ ಆರೋಪಿಯ ಬಂಧನ

ಕಾರ್ಕಳ : ಆನ್‌ಲೈನ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್‌ ಠಾಣೆಯ ಪೊಲೀಸರು ಆರೋಪಿಯನ್ನು ಒಡಿಶಾದಲ್ಲಿ ಬಂಧಿಸಿ, ಆತನಿಂದ 1,56,100ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿದೇಶದಲ್ಲಿ ಉದ್ಯೋಗಿಯಾಗಿರುವ ಬೆಳ್ಮಣ್‌ ನಿವಾಸಿ ಪ್ರಶಾಂತ್‌ ಶೆಟ್ಟಿ ಅವರು ಬೆಳ್ಮಣ್‌ನ ಯೂನಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು. ಈ ಎರಡೂ ಖಾತೆಗಳಲ್ಲಿ ಪೇಟಿಎಂ ಆನ್‌ಲೈನ್‌ ಪೇಮೆಂಟ್‌ ಸಿಸ್ಟಂ ಹೊಂದಿದ್ದು, ಫೆ. 10 ರಿಂದ 20ರ ನಡುವೆ ಯಾರೋ ಅಪರಿಚಿತರು ಇವರ ಗಮನಕ್ಕೆ ಬಾರದೆ ಒಟ್ಟು 1,56,100 ರೂ. ಗಳನ್ನು ವರ್ಗಾಯಿಸಿ ವಂಚಿಸಿದ್ದರು. ಈ ಬಗ್ಗೆ ಉಡುಪಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆನ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌ ಅವರ ನೇತೃತ್ವದಲ್ಲಿ ಎಎಸ್‌ಐ ಉಮೇಶ್‌ ಜೋಗಿ ಮತ್ತು ಸಿಬಂದಿ ನಿಲೇಶ್‌ ಅವರ ತಂಡ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿ ವಿಶಾಲ್‌ ಕೋನಪಾಲ(30)ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



































































































error: Content is protected !!
Scroll to Top