ಬುಲೆಟ್‌ಗೆ ಲಾರಿ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬುಲೆಟ್‌ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಸೆ. 2ರಂದು ಕಲ್ಯಾದಲ್ಲಿ ಸಂಭವಿಸಿದೆ. ಅಲೆವೂರು ಗ್ರಾಮದ ಶ್ರೀಜೇಶ್‌ ಜಿ. ನಿಟ್ಟೆ ಇಂಜಿನಿಯರಿಂಗ್‌ ಕಾಲೇಜ್‌ನಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದು, ಸೆ. 2ರಂದು ಬುಲೆಟ್ ಬೈಕ್‌ನಲ್ಲಿ ಅಲೆವೂರಿನಿಂದ ನಿಟ್ಟೆ ಕಾಲೇಜಿಗೆ ರಾಜ್ಯ ಹೆದ್ದಾರಿ ಉಡುಪಿ-ಪಳ್ಳಿ-ಕಾರ್ಕಳ ರಸ್ತೆಯಲ್ಲಿ ಬರುತ್ತಿರುವಾಗ ಬೆಳಿಗ್ಗೆ 08-30 ಗಂಟೆಗೆ ಕಲ್ಯಾ ಗ್ರಾಮದ ಕೈರಬೆಟ್ಟು ಎಂಬಲ್ಲಿ ತಲುಪುವಾಗ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಪಳ್ಳಿಕಡೆಗೆ ಮುರುಗವೇಲು ಎಂ. ಎಂಬವರು ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಜೇಶ್‌ ಸವಾರಿ ಮಾಡುತ್ತಿದ್ದ ಬುಲೆಟ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಶ್ರೀಜೇಶ್‌ ಬುಲೆಟ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುವನ್ನು ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಶ್ರೀಜೇಶ್‌ ಅವರ ತಾಯಿ ಪುಷ್ಪಲತಾ ಬಿ.ಎಸ್‌. ನೀಡಿರುವ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.























































































































error: Content is protected !!
Scroll to Top