ಕಾರ್ಕಳ : ಅಂತಾರಾಷ್ಟ್ರೀಯ ಮಟ್ಟದ ಏಷ್ಯನ್ ತ್ರೋಬಾಲ್ ಚಾಂಪಿಯನ್ಶಿಪ್ -2024 ಪಂದ್ಯಾಟಕ್ಕೆ ಆಳ್ವಾಸ್ ಕಾಲೇಜಿನ ದ್ವಿತೀಯ ಎಂ.ಎಸ್ಸಿ ರಾಸಾಯನಶಾಸ್ತ್ರದ ವಿದ್ಯಾರ್ಥಿನಿ ರೆಂಜಾಳದ ರಕ್ಷಾ ಆಯ್ಕೆಯಾಗಿದ್ದಾರೆ. ಈ ಪಂದ್ಯಾಟವು ಸೆ. 16 ರಿಂದ 18ರವರೆಗೆ ಮಲೇಷ್ಯಾದ ಕೌಲಾಲಂಪುರ್ನಲ್ಲಿ ನಡೆಯಲಿದೆ. ರಕ್ಷಾ ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇವರು ರೆಂಜಾಳದ ಸುರೇಖಾ – ರವಿ ಪೂಜಾರಿ ದಂಪತಿ ಪುತ್ರಿ.
ಏಷ್ಯನ್ ತ್ರೋಬಾಲ್ ಚಾಂಪಿಯನ್ಶಿಪ್ಗೆ ರೆಂಜಾಳದ ರಕ್ಷಾ ಆಯ್ಕೆ



























































