ಸೆ. 1 : ಸ್ನೇಹ ಜ್ಯೋತಿ ಫ್ರೆಂಡ್ಸ್ ಅನಂತಶಯನ – ಶ್ರೀ ಸತ್ಯನಾರಾಯಣ ಪೂಜೆ, ರಂಗ ಪೂಜೆ – ಯಕ್ಷಗಾನ ತಾಳ ಮದ್ದಳೆ

ಕಾರ್ಕಳ : ಸ್ನೇಹ ಜ್ಯೋತಿ ಫ್ರೆಂಡ್ಸ್ ಆನಂತಶಯನ ಇವರ ವತಿಯಿಂದ 30ನೇ ವರ್ಷದ ಶ್ರಾವಣ ಮಾಸದ ಹೂವಿನ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ರಂಗ ಪೂಜೆ ಹಾಗೂ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಸೆ. 1ರಂದು ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 7 ಗಂಟೆಗೆ ಗಣ ಹೋಮ, 9.30ರಿಂದ ಶ್ರೀ ಸತ್ಯನಾರಾಯಣ ಪೂಜೆ, 11.30 ರಿಂದ ಶ್ರೀ ಪಾಂಡು ಶೇರಿಗಾರ್‌ ಮತ್ತು ಬಳಗದವರಿಂದ ಸೆಕ್ಸಾಪೋನ್‌ ವಾದನ, ಮಧ್ಯಾಹ್ನ 12. 30ರಿಂದ ಶ್ರೀ ಸಿದ್ಧಿವಿನಾಯಕ ಬಾಲ ಭಜನಾ ಮಂಡಳಿ ಸಾಂತ್ರಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7 ರಿಂದ 8.30 ರವರೆಗೆ ಶ್ರೀ ವೆಂಕಟರಮಣ ಭಜನಾ ಮಂಡಳಿ, ಕಾರ್ಕಳ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30ರಿಂದ ಹೂವಿನ ಪೂಜೆ ಹಾಗೂ ರಂಗಪೂಜೆ ಬಳಿಕ 9 ಗಂಟೆಗೆ ಸಹಭೋಜನ ನಡೆಯಲಿದೆ.

ತಾಳ ಮದ್ದಳೆ
ಮಧ್ಯಾಹ್ನ ಗಂಟೆ 1.30ರಿಂದ ತೆಂಕು ಮತ್ತು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಚಂದ್ರಕಾಂತಿ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ.
ಹಿಮ್ಮೇಳ – ಬಡಗು
ಭಾಗವತರು – ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಳೆ-ಅಕ್ಷಯ ಆಚಾರ್ಯ ಚೆಂಡೆ- ಕೋಟ ಶಿವಾನಂದ,

ಹಿಮ್ಮೇಳ – ತೆಂಕು
ಭಾಗವತರು- ಕಾವ್ಯಶ್ರೀ ಅಜೇರು, ಮದ್ದಳೆ, ಚೆಂಡೆ -ಆನಂದ ಗುಡಿಗಾರ್ ಕೆರ್ವಾಶೆ, ರವಿರಾಜ ಜೈನ್ ಕಾರ್ಕಳ, ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್ ಮಧೂರು, ಪ್ರದೀಪ್‌ ಸಾಮಗ ವಿ., ಭಾಲಕೃಷ್ಣ ಭಟ್‌ ಪುತ್ತಿಗೆ, ಜಬ್ಬರ್ ಸಮೋ ಸಂಪಾಜೆ, ಶಾಂತಾರಾಮ ಪ್ರಭು ನಿಟ್ಟೂರು ಹಾಗೂ ಶ್ರೀರಮಣ ಆಚಾರ್ಯ ಕಾರ್ಕಳ























































































































error: Content is protected !!
Scroll to Top