ಜೈನ ಸನ್ಯಾಸಿಯಾಗಲು 200 ಕೋ.ರೂ. ಆಸ್ತಿ ದಾನ ಮಾಡಿದ ಉದ್ಯಮಿ

ಅಹ್ಮದಾಬಾದ್‌: ಗುಜರಾತಿನ ಸಬರ್‌ಕಾಂತ ಜಿಲ್ಲೆಯ ಹಿಮತ್‌ನಗರ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ನಿರ್ಧರಿಸಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಏಪ್ರಿಲ್ 22ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ.
ವಿಶೇಷವೆಂದರೆ ಎರಡು ವರ್ಷಗಳ ಹಿಂದಷ್ಟೇ ದಂಪತಿಯ ಮಗ ಮತ್ತು ಮಗಳು ಐಷಾರಾಮಿ ಜೀವನವನ್ನು ತ್ಯಜಿಸಿ ದೀಕ್ಷೆ ತೆಗೆದುಕೊಂಡಿದ್ದಾರೆ. ಇದೀಗ ತಂದೆ-ತಾಯಿ ಕೂಡ ದೀಕ್ಷೆ ಪಡೆದುಕೊಳ್ಳಲಿದ್ದಾರೆ.
ಭವೇಶ್ ಭಾಯ್ ಭಂಡಾರಿ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಎಲ್ಲ ಸೌಕರ್ಯಗಳೊಂದಿಗೆ ಬೆಳೆದವರು. ಆದರೆ ಈಗ 200 ಕೋಟಿ ರೂ. ಅಧಿಕ ಮೌಲ್ಯದ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಇದ್ದಕ್ಕಿದ್ದಂತೆ ಈ ನಿರ್ಧಾರವನ್ನು ಕೈಗೊಂಡಿದ್ದು, ಅಹಮದಾಬಾದ್‌ನಲ್ಲಿರುವ ತಮ್ಮ ಕಟ್ಟಡ ನಿರ್ಮಾಣ ವ್ಯವಹಾರವನ್ನು ಬಿಟ್ಟು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ.



































































































error: Content is protected !!
Scroll to Top