ಭೂಮಿ ತಂಪೆರೆದ ಮಳೆರಾಯ – ತಾಲೂಕಿನ ವಿವಿಧೆಡೆ ಮಳೆ

ಕಾರ್ಕಳ : ತಾಲೂಕಿನ ವಿವಿಧೆಡೆ ಮಾ. 22ರಂದು ಮುಂಗಾರು ಪೂರ್ವ ಮಳೆ ಸುರಿದಿದೆ. ಕೆರ್ವಾಶೆ, ಮುಂಡ್ಲಿ, ಮಾಳ, ನಲ್ಲೂರು, ಶಿರ್ಲಾಲು, ಅಜೆಕಾರು ಸೇರಿದಂತೆ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಶುಕ್ರವಾರ ಮುಂಜಾನೆ ಹನಿ ಹನಿ ಮಳೆಯಾಗಿದೆ. ಇನ್ನು ಮಧ್ಯಾಹ್ನದ ವೇಳೆ ಗುಡುಗು ಸಹಿತ ಮಳೆಯಾಗಿದೆ. ಆದಾಗ್ಯೂ, ತಾಲೂಕಿನ ಕೆಲವು ಭಾಗಗಳಲ್ಲಿ ಹೆಚ್ಚಿನ ತಾಪಮಾನ ಮುಂದುವರಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಹೆಬ್ರಿಯಲ್ಲಿ ಮೋಡ ಕವಿದ ವಾತಾವರಣ
ಹೆಬ್ರಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಹೆಚ್ಚಿದ ತಾಪಮಾನದಿಂದಾಗಿ ಜನ ಹೈರಾಣಾಗಿದ್ದಾರೆ. ಮಳೆ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.

































































































error: Content is protected !!
Scroll to Top