ತುಮಕೂರು : ಶಿರ್ಲಾಲಿನ ಯುವಕ ಸಹಿತ ಮೂವರ ಶವ ಕಾರಿನಲ್ಲಿ ಪತ್ತೆ

ಬೆಳ್ತಂಗಡಿ: ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಾರಿನಲ್ಲಿದ್ದ ಮೂರು ಶವಗಳ ಪೈಕಿ ಒಂದು ಬೆಳ್ತಂಗಡಿಯ ಶಿರ್ಲಾಲು ಮೂಲದ ಯುವಕನದ್ದು ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ಸಾಹುಲ್(26) ಮತ್ತು ಇಸಾಕ್ (25) ಹಾಗೂ ಶಿರ್ಲಾಲಿನ ಇಮ್ತಿಯಾಝ್ (34) ಕಾರಿನೊಳಗೆ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾದವರು. ತುಮಕೂಖುರಿನ ಕೋರ ಹೋಬಳಿಯ ಕುಚ್ಚಂಗಿ ಕೆರೆ ಬಳಿ ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರು ದಕ್ಷಿಣ ಕನ್ನಡದಲ್ಲಿ ನೋಂದಣಿಯಾಗಿರುವ ಮಾಹಿತಿ ಸಿಕ್ಕಿದ ಬಳಿಕ ತನಿಖೆ ನಡೆಸಿದಾಗ ಬೆಳ್ತಂಗಡಿಯ ರಫೀಕ್‌ ಎಂಬವರಿಗೆ ಸೇರಿದ್ದು ಎಂಬ ಮಾಹಿತಿ ತಿಳಿದುಬಂದಿತ್ತು. ಕಾರಿನ ಢಿಕ್ಕಿಯಲ್ಲಿ ಎರಡು ಮೃತದೇಹಗಳು ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮೂವರನ್ನು ಕೊಲೆಗೈದು ಕಾರಿನೊಳಗೆ ಹಾಕಿ ಕಾರಿಗೆ ಬೆಂಕಿ ಕೊಟ್ಟಿರಬಹುದೆಂದು ಶಂಕಿಸಲಾಗಿದೆ.
ಕಾರಿನಲ್ಲಿ ಒಟ್ಟು ಐವರು ತೆರಳಿದ್ದರು. ಉಳಿದ ಇಬ್ಬರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ವ್ಯವಹಾರದ ತಕರಾರಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಅನುಮಾನವಿದೆ. ಹತ್ತು ದಿನಗಳ ಹಿಂದೆಯೇ ಅವರು ಬೆಳ್ತಂಗಡಿಯಿಂದ ಹೋಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ಯಾವ ವ್ಯವಹಾರ ನಡೆಸುತ್ತಿದ್ದರು, ಈ ಮೊದಲು ಅಪರಾಧ ಕೃತ್ಯಗಳಲ್ಲಿ ಶಾಮಿಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ನಾಪತ್ತೆಯಾಗಿರುವ ಇಬ್ಬರು ಸಿಕ್ಕಿದರೆ ಕೊಲೆಯ ಸುಳಿವು ಸಿಗಬಹುದು ಎನ್ನಲಾಗಿದೆ.



































































































error: Content is protected !!
Scroll to Top