ಯಕ್ಷಧ್ವನಿ ಕಾರ್ಕಳ ಇದರ ಆಶ್ರಯದಲ್ಲಿ ಸಂವಾದ ಸಲ್ಲಾಪ-3 ತಾಳಮದ್ದಲೆ

ಕಾರ್ಕಳ : ಯಕ್ಷಧ್ವನಿ ಕಾರ್ಕಳ ಇದರ ಆಶ್ರಯದಲ್ಲಿ, ಹೊಟೆಲ್‌ ಜೈನ್‌ ಮಾಲಕರಾದ ಗುಣಪಾಲ ಜೈನ್‌ ಮತ್ತು ಗೆಳೆಯರ ಬಳಗದ ವತಿಯಿಂದ ಯಕ್ಷಗಾನ ತಾಳಮದ್ದಳೆ ಕೂಟವು ಫೆ.18ರಂದು ಸಂಜೆ 4ಗಂಟೆಗೆ ಸರ್ವಜ್ಞ ವೃತ್ತದ ಬಳಿಯಿರುವ ಹೊಟೇಲ್‌ ಜೈನ್‌ನಲ್ಲಿ ನಡೆಯಲಿರುವುದು.

ಸಂವಾದ ಸಲ್ಲಾಪ-3, ಬಾಹುಬಲಿ – ಭರತ, ಭೀಮ – ದ್ರೌಪದಿ, ಶಲ್ಯ – ಕೌರವ ಎಂಬ ಯಕ್ಷಗಾನ ತಾಳ ಮದ್ದಲೆಯ ಪ್ರಸಂಗದೊಂದಿಗೆ ಮುಮ್ಮೇಳದಲ್ಲಿ ಮುನಿರಾಜ್‌ ರೆಂಜಾಳ, ಸರ್ವಂಗಳ ಈಶ್ವರ ಭಟ್ಟ, ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ, ಸುಂಕದಗುಂಡಿ ಗಣಪತಿ ಭಟ್ಟ, ಜಬ್ಬಾರ್‌ ಸಮೊ ಸಂಪಾಜೆ ಮತ್ತು ವಿಟ್ಲ ಶಂಭು ಶರ್ಮ ಭಾಗವಹಿಸಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಭರತ್‌ ಶೆಟ್ಟಿ ಸಿದ್ಧಕಟ್ಟೆ, ಮದ್ದಳೆಯಲ್ಲಿ ಸತ್ಯಜಿತ್‌ ರಾವ್‌ ರಾಯಿ, ಚಂಡೆ ವಾದನದಲ್ಲಿ ವಿಕಾಸ್‌ ಕೆರೆಕಾಡು ಮತ್ತು ಚಕ್ರತಾಳದಲ್ಲಿ ವೆಂಕಟೇಶ್‌ ಕಾರ್ಕಳ ಭಾಗಿಯಾಗಲಿದ್ದಾರೆ.



















































































error: Content is protected !!
Scroll to Top