ಒಳನುಸುಳಲು ಪ್ರಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ

ಶ್ರೀನಗರ : ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ಜಮ್ಮು-ಕಾಶ್ಮೀರದ ಚಲ್ ಸೆಕ್ಟರ್‌ನ ಕುಮ್ಕಾಡಿ ಪ್ರದೇಶದಲ್ಲಿ ಕುಪ್ವಾರ ಪೊಲೀಸರು ಮತ್ತು ಸೇನೆ ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದಾರೆ. ಈ ಕಾರ್ಯಚರಣೆ ವೇಳೆ ಒಳನುಸುಳಲು ಪ್ರಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದೀಗ ಈ ಪ್ರದೇಶದಲ್ಲಿ ಇನ್ನೂ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕುಪ್ವಾರ ಜಿಲ್ಲಾ ಪೊಲೀಸ್​​ ಇಲಾಖೆ Xನಲ್ಲಿ‌ (ಟ್ವಿಟ್ಟರ್) ತಿಳಿಸಿದೆ. ಇದರ ಜತೆಗೆ ಭದ್ರತಾ ಪಡೆಗಳು ಪಾಕಿಸ್ತಾನದ ಪಿಸ್ತೂಲ್ ಜೊತೆಗೆ ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳು ಹಾಗೂ ಪಾಕಿಸ್ತಾನದ ಕರೆನ್ಸಿಯಲ್ಲಿ 2,100 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.



































































































error: Content is protected !!
Scroll to Top