ನೀಟ್ ಫಲಿತಾಂಶ : ಕ್ರಿಯೇಟಿವ್‌ ಕಾಲೇಜಿನ 7 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ

25 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ ಗಳಿಕೆ

ಕಾರ್ಕಳ : ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ್ದ 2023ನೇ ಸಾಲಿನ ನೀಟ್ ಫಲಿತಾಂಶದಲ್ಲಿ ಕ್ರಿಯೇಟಿವ್‌ ಕಾಲೇಜಿನ 7 ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಮತ್ತು 25 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ಜಾಗೃತಿ ಕೆ.ಪಿ. 661, ಉದ್ಭವ್ ಎಂ. ಆರ್. 625, ತನುಶ್ರೀ ಕೆ. ಎನ್. 625, ಶ್ರೇಯಸ್ ಎಸ್. ಚಿಕಾಲೇ 612, ಸಾತ್ವಿಕ್ ಎಸ್. ಶೆಟ್ಟಿ 609, ಚಂದನ ಹೆಚ್. ಎಂ. 605, ಸಾಕ್ಷಿತ್ ಶೆಟ್ಟಿ 604, ಸ್ವೀಕೃತಿ ಶೆಟ್ಟಿ 596, ಗೌರಿ ಸಿ. ಸಂಕೊಲ್ 595, ಮನೋಜ ಪಾಲನ್ಕರ್ 592, ಪ್ರೀತಮ್ ಎಸ್. ಜಿ. 584, ಪ್ರಶಿನ್ ಶೆಟ್ಟಿ 578, ಚಮನ್ ಜಿ. 576, ಜ್ಞಾನದೀಪ್ ಕೆ. ಆರ್. 555, ಸಾನ್ವಿ ಎಂ. ಆರ್. 548, ಶ್ರೀಗಂಗಾ 547, ಜೀವನ್ ಎ. 545, ನೇಹಾ ಬಿ. ಜಿ. 543, ಮಿಂಚು ಪಿ. ಆರ್ 535, ಅವಿನ್ ಫ್ರಾನ್ಸೀಸ್ ಡಿಸೋಜಾ 531, ಅಭಯ್ ಕೆ. ಆರ್. 525, ಶ್ರೇಯಸ್ ಎಸ್. ಶೆಟ್ಟಿ 521, ಆದಿತ್ಯ ಮಹೇಶ್ ಶೇಟ್ 517, ಭರತ್ ವಿ. 516, ಪ್ರವೀಣ್ ಆರ್. ಎಮ್ಮಿ 515 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
68 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಹಾಗೂ 110 ವಿದ್ಯಾರ್ಥಿಗಳು 300 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಕೆಟಗರಿ ವಿಭಾಗದಲ್ಲಿ ಜಾಗೃತಿ ಕೆ.ಪಿ. ಆಲ್‌ ಇಂಡಿಯಾ ರ‍್ಯಾಂಕ್‌ನಲ್ಲಿ 23ನೇ ರ‍್ಯಾಂಕ್‌ ಹಾಗೂ ಉದ್ಭವ್ ಎಂ. ಆರ್. 72ನೇ ರ‍್ಯಾಂಕ್‌ ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 209 ವಿದ್ಯಾರ್ಥಿಗಳೂ ನೀಟ್‌ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ, ಉಪನ್ಯಾಸಕ ವರ್ಗ ಹಾಗೂ ನೀಟ್‌ ಸಂಯೋಜಕ ಲೋಹಿತ್‌ ಎಸ್.‌ ಕೆ. ಅಭಿನಂದಿಸಿದ್ದಾರೆ.





















































error: Content is protected !!
Scroll to Top