ಮಣಿಪಾಲ : ವಿಧಾನಸೌಧದಲ್ಲಿ ಸರ್ಕಾರಿ ಹುದ್ದೆ ಕೆಲಸ ಕೊಡಿಸುವುದಾಗಿ ಕುಂಜಿಬೆಟ್ಟು ಮನೋಳಿಗುಜ್ಜಿ ನಿವಾಸಿ ನವೀನ್ ರಾವ್ ಅವರಿಂದ ಹಣ ಪಡೆದು ವಂಚಿಸಲಾಗಿದೆ. ಭಾಸ್ಕರ್ ಭಟ್ ಎಂಬಾತ ಕಾರ್ಯದರ್ಶಿ ಕೆಲಸ ಕೊಡಿಸುವುದಾಗಿ ಹಂತ ಹಂತವಾಗಿ ೪೦ ಸಾವಿರ ರೂ. ಪಡೆದು ಫೆ.20ರ ಒಳಗೆ ಉದ್ಯೋಗದ ಆದೇಶ ಬರುವುದಾಗಿ ಹೇಳಿದ್ದು, ನೇಮಕಾತಿ ಆದೇಶವು ಬಾರದೆ ವಂಚಿಸಿದ್ದಾರೆ. ಕೊಟ್ಟ ಹಣವನ್ನು ವಾಪಾಸು ಕೊಡಲು ಹೇಳಿದಾಗ ಅವಾಚ್ಯ ಶಬ್ದದಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿವೋರ್ವರಿಗೆ ವಂಚನೆ
























