ದುರ್ಗ ತೆಳ್ಳಾರು ಸ. ಪ್ರೌ. ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಶ್ರೀಯಾ ಶಾಲೆಗೆ ಪ್ರಥಮ

ಕಾರ್ಕಳ : 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದುರ್ಗ ತೆಳ್ಳಾರು ಸ. ಪ್ರೌ. ಶಾಲೆ ಶೇ. 95.45 ಫಲಿತಾಂಶ ದಾಖಲಿಸಿದೆ. ಶ್ರೀಯಾ 617 ಅಂಕ ಪಡೆಯುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮುಂಡ್ಲಿ ಗುಣಕರ ಮತ್ತು ಬೇಬಿ ದಂಪತಿಯ ಪುತ್ರಿ ಶ್ರೀಯಾ ಶೇ.98 ಪಡೆದಿರುತ್ತಾರೆ.

ಪರೀಕ್ಷೆಗೆ ಹಾಜರಾದ 22 ವಿದ್ಯಾರ್ಥಿಗಳಲ್ಲಿ 21 ಉತ್ತೀರ್ಣರಾಗಿದ್ದು, ಎ+ ಗ್ರೇಡ್ ನಲ್ಲಿ 7 ಹಾಗೂ ಎ ಗ್ರೇಡ್ ನಲ್ಲಿ 9 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಅನ್ಶಿದಾತು ಸಕೀನ 594 ಅಂಕದೊಂದಿಗೆ ದ್ವಿತೀಯ ಹಾಗೂ ಅನನ್ಯ 589 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದ, ಎಸ್.ಡಿ.ಎಮ್.ಸಿ. ಹಾಗೂ ಹಳೆ ವಿದ್ಯಾರ್ಥಿ ಸಂಘ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

















































error: Content is protected !!
Scroll to Top