ಆಣೆ ಪ್ರಮಾಣದ ಮೂಲಕ ಮತಯಾಚನೆ – ಶುಭದ ರಾವ್‌ ಆರೋಪ

ಕಾರ್ಕಳ : ಕಾರ್ಕಳದಲ್ಲಿ ಉದಯ ಕುಮಾರ್‌ ಶೆಟ್ಟಿಯವರ ಗೆಲುವು ನಿಶ್ಚಿತ. ಆದರೆ, ಸೋಲಿನ ಭೀತಿಯಲ್ಲಿರುವ ಸುನಿಲ್‌ ಕುಮಾರ್‌ ಆಣೆ ಪ್ರಮಾಣ ಮಾಡಿಸುವ ಮೂಲಕ ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದ ಇದನ್ನು ಖಂಡಿಸುತ್ತೇನೆ ಎಂದು ಬ್ಲಾಕ್‌ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮೇ 7 ರಂದು ಪ್ರಕಾಶ್‌ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಯಾರು ಹಣ ನೀಡಿದರೂ ಅದು ಜೀವನದುದ್ದಕ್ಕೂ ಬರಲಾರದು. ಆಣೆ ಪ್ರಮಾಣಗಳಿಂದಾಗಿ ಭವಿಷ್ಯದಲ್ಲಿ ತಾವು ಸಮಸ್ಯೆ ಎದುರಿಸಬೇಕಾದಿತು. ಪ್ರಮಾಣ ಮಾಡಿಸಿಕೊಳ್ಳುವವರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇದರಿಂದಾಗಿ ನಾಳೆ ತಮ್ಮ ಕುಟುಂಬ ತೊಂದರೆ ಅನುಭವಿಸುವಂತಾಗುತ್ತದೆ. ಪ್ರತಿ ಬೂತ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯಾಗಿ ಆಮಿಷ, ಆಣೆ ಪ್ರಮಾಣದ ಮೂಲಕ ಮನೆ ಮನೆಗೆ ಬಂದು ಮತಯಾಚಿಸುವ ಬಿಜೆಪಿ ಕಾರ್ಯಕರ್ತರಿಗೆ ಎಚ್ಚರ ನೀಡುತ್ತಿದ್ದೇವೆ ಎಂದರು. ಈ ಸಂದರ್ಭ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಉಪಾಧ್ಯಕ್ಷ ನಿಟ್ಟೆ ದಿನಕರ್ ಶೆಟ್ಟಿ ಉಪಸ್ಥಿತರಿದ್ದರು.

















































error: Content is protected !!
Scroll to Top