ಭಾರತದ ಪ್ರಪ್ರಥಮ ಜಲ ಮೆಟ್ರೋ ಸೇವೆ ಕೇರಳದ ಕೊಚ್ಚಿಯಲ್ಲಿ ಇಂದು ಆರಂಭ

ಕೊಚ್ಚಿ : ಭಾರತದ ಮೊಟ್ಟಮೊದಲ ಜಲ ಮೆಟ್ರೋ ಸೇವೆ ಕೊಚ್ಚಿಯಲ್ಲಿ ಏ.26ರಂದು ಆರಂಭಗೊಂಡಿತು. ಟಿಕೆಟ್ ದರಗಳು ಕನಿಷ್ಠ ರೂ. 20ರಿಂದ ಗರಿಷ್ಠ ರೂ. 40ರವರೆಗೆ ನಿಗದಿಪಡಿಸಲಾಗಿದೆ. ರೆಗ್ಯುಲರ್ ಪ್ರಯಾಣಿಕರು ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಪಡೆದುಕೊಳ್ಳಬಹುದಾಗಿದ್ದು ಇವುಗಳ ದರ ರೂ. 180 ರಿಂದ ಮೊದಲುಗೊಂಡು ರೂ. 1,500 ವರೆಗೆ ಇದೆ. ಪ್ರಯಾಣಿಕರು ಕೊಚ್ಚಿ ವನ್ ಕಾರ್ಡ್ ಖರೀದಿಸಿ ಕೊಚ್ಚಿ ಮೆಟ್ರೋ ರೇಲ್ ಮತ್ತು ಜಲ ಮೆಟ್ರೋ ಎರಡರಲ್ಲೂ ಪ್ರಯಾಣಿಸಬಹುದಾಗಿದೆ. ಜಲ ಮೆಟ್ರೋದ ಚೊಚ್ಚಲು ಯಾನದಲ್ಲಿ ಮಾಜಿ ಡಿಜಿಪಿ ಮತ್ತು ಕೊಚ್ಚಿ ಮೆಟ್ರೋ ರೇಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಲೋಕನಾಥ್ ಬೆಹ್ರಾ ಇತರ ಪ್ರಯಾಣಿಕರೊಂದಿಗೆ ಪಯಣಿಸಿದರು.

ವಾತಾನುಕೂಲಿತ ವಿದ್ಯುತ್ ಚಾಲಿತ ಹೈಬ್ರೀಡ್ ಬೋಟ್ 100 ಮತ್ತು 50 ಪ್ರಯಾಣಿಕರ ಎರಡು ಸಾಮರ್ಥ್ಯಗಳಲ್ಲಿ ಕಾರ್ಯಾಚರಣೆ ಅರಂಭಿಸಿದೆ. ವೈಟಿಲ-ಕಕ್ಕನಾಡ್ ಸೇವೆ ಗುರುವಾರದಿಂದ ಆರಂಭಗೊಳ್ಳಲಿದೆ. ಇಡೀ ಯೋಜನೆ ಸಂಪೂರ್ಣಗೊಂಡಾಗ ವಾಟರ್ ಮೆಟ್ರೋ 78 ಬೋಟ್ ಮೂಲಕ ಕೊಚ್ಚಿಯ 10 ದ್ವೀಪಗಳು ಮತ್ತು 38 ಟರ್ಮಿನಲ್ ಗಳ ನಡುವೆ ಸಂಪರ್ಕ ಕಲ್ಪಿಸಲಿದೆ.

ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ಎಲ್ಲ ಪ್ರಯಾಣಿಕರನ್ನು ಈ ರಮ್ಯವಾದ ನಾವೆಗೆ ಸ್ವಾಗತಿಸುತ್ತೇನೆ. ನಾವೆಯ ಪ್ರಾಯೋಗಿಕ ಯಾನಗಳಲ್ಲಿ ನಾನು ಈಗಾಗಲೇ ಪ್ರಯಾಣಿಸಿದ್ದೇನಾದರೂ ಪ್ರಯಾಣಿಕರೊಂದಿಗೆ ಹೋಗುತ್ತಿರುವುದು ಹೆಚ್ಚು ತೃಪ್ತಿದಾಯಕವಾಗಿದೆ. ಹೆಚ್ಚೆಚ್ಚು ಜನ ಜಲ ಮೆಟ್ರೋನಲ್ಲಿ ಪ್ರಯಾಣಿಸಲಾರಂಭಿಸಿದ ನಂತರ ರಸ್ತೆಗಳಲ್ಲಿ ವಾಹನ ಸಂಚಾರ ಕಮ್ಮಿಯಾಗಿ ಜನ ತಮ್ಮ ಗಮ್ಯವನ್ನು ತಡವಿಲ್ಲದೆ ತಲುಪಬಹುದು ಎಂದು ನಿರ್ದೇಶಕ ಲೋಕನಾಥ್ ಬೆಹ್ರಾ ತಿಳಿಸಿದರು.





































































error: Content is protected !!
Scroll to Top