ಹಿರ್ಗಾನ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಕಾರ್ಕಳ: ಕೊರೊನಾ, ಪ್ರಾಕೃತಿಕ ಅವಘಡ ಸಂಭವಿಸಿ ಕ್ಷೇತ್ರದ ಜನ ಸಂಕಷ್ಟಕ್ಕೆ ಒಳಗಾಗಿ ನೋವಿನಲ್ಲಿದ್ದ ವೇಳೆ ಗುಹೆ ಸೇರಿಕೊಂಡಿದ್ದ ಕಾಂಗ್ರೆಸ್ ಈಗ ಚುನಾವಣೆ ವೇಳೆ ಯಾವ ಮುಖ ಹೊತ್ತುಕೊಂಡು ಜನರ ಬಳಿಗೆ ಹೋಗಿ ಮತ ಯಾಚಿಸುತ್ತಿದೆ. 5 ವರುಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಕರೆ ನೀಡಿದರು. ಅವರು ಸೋಮವಾರದಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹಿರ್ಗಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಜನರ ಕಷ್ಟ-ಕಾರ್ಪಣ್ಯ ನೋವುಗಳಲ್ಲಿ ಬಿಜೆಪಿ ಜನರ ಜತೆ ನಿರಂತರವಾಗಿ ನಿಂತಿದೆ. ಜನಸಾಮಾನ್ಯರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿದ್ದ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿ ಅವರ ಕಷ್ಟಗಳನ್ನು ಪರಿಹರಿಸಿದ್ದೇವೆ. ಪ್ರತಿ ಹಳ್ಳಿಯ ಕಟ್ಟ ಕಡೆಯ ನಿವಾಸಿಯ ಕುಟುಂಬಕ್ಕೆ ಬಿಜೆಪಿ ಸ್ಪಂದಿಸಿದೆ. ಇತರೆಲ್ಲ ಸಮಯಗಳಲ್ಲಿ  ಸ್ಪಂದಿಸುವುದು ಇದ್ದಿದ್ದೆ, ಆದರೆ ಕೊರೊನಾ ಬಂದು ಜನ ನೋವಿನಲ್ಲಿರುವಾಗ ಅವರ ಬಳಿ ತೆರಳಿ  ವೈದ್ಯಕೀಯ ಸೇವೆ, ಆರೋಗ್ಯ ತಪಾಸಣೆ, ಕಿಟ್ ನೀಡಿದಲ್ಲದೆ ನಾಗರಿಕರ ಆರೋಗ್ಯ, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಹಾನಿ ಸಂಭವಿಸದಂತೆ ತಡೆದು ಕ್ರಮ ಕೈಗೊಂಡಿದ್ದೇವೆ. ಮುಂಬಯಿ, ಪೂನಾದಲ್ಲಿರುವ ಜನರು ಮರಳಿ ಕ್ಷೇತ್ರಕ್ಕೆ ಬಂದಾಗ ಅವರಿಗೆ ಯಾವುದೇ ತೊಂದರೆ ಆಗದಂತೆ ಕ್ವಾರಂಟೈನ್ ಸ್ಥಾಪಿಸಿ, ವ್ಯವಸ್ಥೆ ಕಲ್ಲಿಸಿದ್ದೇವೆ. ಆಗ ಇದೇ ಕಾಂಗ್ರೆಸ್ಸಿಗರು ಎಲ್ಲಿ ಅಡಗಿ ಕುಳಿತಿದ್ದರು? ಎಂದು ಪ್ರಶ್ನಿಸಿರುವ ಅವರು 5 ವರುಷ ಜನಸಾಮಾನ್ಯರ ಕಡೆ ತಿರುಗಿಯು ನೋಡದವರು ಈಗ ಚುನಾವಣೆ ಹೊತ್ತಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದುಕೊಂಡು ವಿವಿಧ ಮುಖವಾಡ ಹೊತ್ತು ಜನರ ಮನೆ ಬಾಗಿಲಿಗೆ ಬಂದು ಭರವಸೆಗಳನ್ನು ನೀಡುತ್ತಿದ್ದಾರೆ. ಇಷ್ಟು ದಿನ ಒಮ್ಮೆಯು ಕ್ಷೇತ್ರದ ಕಡೆ ತಿರುಗಿ ನೋಡದವರಿಗೆ ಈಗ ಜನರ ನೆನಪಾಗಿರುವುದು ಹಾಸ್ಯಾಸ್ಪದ ಎಂದು ಹೇಳಿದರು. ಕ್ಷೇತ್ರದ ಜನ ಸಮಸ್ಯೆಗೆ ಒಳಗಾದಗ, ಮೂಲಭೂತ ಸೌಕರ್ಯ ಕೇಳಿ ಬಂದಾಗ ಯಾವುದೇ ಜಾತಿ, ಧರ್ಮ ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ನ್ಯಾಯ ನೀಡಿದ್ದೇವೆ. ಇದನ್ನು ಕ್ಷೇತ್ರದ ಮತದಾರರು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ.

ಈ ಚುನಾವಣೆಯಲ್ಲಿ ಅಪಪ್ರಚಾರ ನಡೆಸುವವರನ್ನು, 5 ವರುಷಕ್ಕೆ ಒಮ್ಮೆ ಮನೆಗಳಿಗೆ ಬರುವವರನ್ನು ತಿರಸ್ಕರಿಸಿ. ಜನರ ಜತೆಗೆ ಸದಾ ಕಾಲವು ಇದ್ದ ಬಿಜೆಪಿ ಶಾಸಕನಾದ ನನ್ನನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಸಂತೋಷ್ ಶೆಟ್ಟಿ, ಶಂಭು ಹೆಗ್ಡೆ, ಹರೀಶ್‌ಚಂದ್ರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.





























































































































































































































error: Content is protected !!
Scroll to Top