ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಮ್ರಾನ್‌ ಪ್ರತಾಪ್‌ ಗಡಿಯಾ ಹೆಸರು : ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ಬೆಂಗಳೂರು : ರಾಜ್ಯಸಭಾ ಸದಸ್ಯ, ಉರ್ದು ಕವಿ ಇಮ್ರಾನ್‌ ಪ್ರತಾಪ್‌ ಗಡಿಯಾ ಅವರನ್ನು ಚುನಾವಣಾ ಪ್ರಚಾರಕರನ್ನಾಗಿ ನೇಮಿಸಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಸಮನ್ವಯ ಸಮಿತಿ ಅಧ್ಯಕ್ಷೆ ಶೋಭಾ ಕರಂದ್ಲಾಜೆ ಅವರು ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರತಾಪ್‌ ಗಡಿಯಾ ಅವರು ದರೋಡೆಕೋರ ಅತೀಕ್ ಅಹಮದ್ ನನ್ನು ಹಾಡಿ ಹೊಗಳಿದ್ದ. ಇವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಳಿಸಿದೆ. ಈ ಮೂಲಕ ಕಾಂಗ್ರೆಸ್ ಸಮಾಜ ವಿರೋಧಿ ಮತ್ತು ದೇಶ ವಿರೋಧಿ ಅಂಶಗಳನ್ನು ಚುನಾವಣೆಯಲ್ಲಿ ಬಳಸುತ್ತಿದೆ ಎಂದು ಕಿಡಿಕಾರಿದರು. ಅತೀಕ್ ವಿರುದ್ಧ ಕೊಲೆ, ಅತ್ಯಾಚಾರ, ಅಪಹರಣ ಸೇರಿದಂತೆ 102 ಪ್ರಕರಣಗಳನ್ನು ದಾಖಲಾಗಿದ್ದವು. ಈತ ಪ್ರತಾಪ್‌ ಗಡಿಯಾ ಮನೆಯಲ್ಲಿಯೇ ಇರುತ್ತಿದ್ದ ಎಂದು ಆರೋಪಿಸಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿದ್ದ ಪ್ರತಾಪ್‌ ಗಡಿಯಾ ಅವರು ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ವಾಗ್ದಾಳಿ ನಡೆಸಿದರು.































































































error: Content is protected !!
Scroll to Top