ಸ್ವಚ್ಛ ಕಾರ್ಕಳ ಬ್ರಿಗೇಡ್‌ನಿಂದ ಸ್ವಚ್ಚತಾ ಅಭಿಯಾನ

ಕಲೊಟ್ಟೆ, ಬಂಗ್ಲೆಗುಡ್ಡೆಯಲ್ಲಿ ಸ್ವಚ್ಛ ಮಾರ್ಗಂ ಏಳನೇ ಕಾರ್ಯಕ್ರಮ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ವಿಶೇಷ ಅಭಿಯಾನ ಸ್ವಚ್ಛ ಮಾರ್ಗಂ ʼನಮ್ಮ ರಸ್ತೆ -ಸ್ವಚ್ಛ ರಸ್ತೆʼ ಅಭಿಯಾನದ 7ನೇ ಕಾರ್ಯಕ್ರಮ ಭಾನುವಾರ 16 ಬೆಳಗ್ಗೆ 6.30ರಿಂದ 8.30ರ ವರೆಗೆ ಕಾರ್ಕಳದ ಕಲೊಟ್ಟೆ, ಬಂಗ್ಲೆಗುಡ್ಡೆ ಭಾಗದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯ ನಿಖಿಲ್ ಆಚಾರ್ಯ ಮುಂದಾಳತ್ವದಲ್ಲಿ ನಡೆಯಿತು.
ಇವರ ಜತೆ ಕಲೊಟ್ಟೆ ಫ್ರೆಂಡ್ಸ್ ತಂಡದ ಸದಸ್ಯರು, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸದಸ್ಯರು,ಪುರಸಭೆ ಸದಸ್ಯೆ ನೀತಾ ಆಚಾರ್ಯ ಹಾಗೂ ಸ್ಥಳೀಯ ನಾಗರಿಕರು ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದರು.
ಸುಮಾರು 45ಕ್ಕೂ ಅಧಿಕ ಸ್ವಯಂಸೇವಕರು ಈ ಅಭಿಯಾನದಲ್ಲಿ ಭಾಗವಹಿಸಿ, ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಲ್ಲಿ ಜನರು ಎಸೆದ ಕಸಗಳನ್ನು, 35ಕ್ಕೂ ಅಧಿಕ ಗೋಣಿ ಚೀಲಗಳಲ್ಲಿ ಸಂಗ್ರಹಿಸಿದರು.





























































































error: Content is protected !!
Scroll to Top