ಬಸ್‌ ನಿಲ್ದಾಣ ಬಳಿ ಮದ್ಯ ಮಾರುತ್ತಿದ್ದ ಆರೋಪಿ ಸೆರೆ

ಹಿರಿಯಡ್ಕ : ಹಿರಿಯಡ್ಕ ಬಸ್ ನಿಲ್ದಾಣ ಬಳಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಮದ್ಯದ ಪ್ಯಾಕ್‌‌ಗಳನ್ನು ತುಂಬಿಕೊಂಡು ಮಾರಾಟ ಮಾಡುತ್ತಿದ್ದ ಮಹೇಂದ್ರ ಪ್ರಭು ಎಂಬಾತನನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಆರೋಪಿ 900 ರೂ. ಮೌಲ್ಯದ 2.52 ಲೀಟರ್‌ ವಿಸ್ಕಿಯನ್ನು ಬಸ್‌ ನಿಲ್ದಾಣದಲ್ಲಿ ಮಾರಾಟ ಮಾಡುತ್ತಿದ್ದ. 300 ರೂ. ನಗದು ಹಣ, 1 ಮೊಬೈಲ್ ಫೋನನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಪಿಎಸ್‌ಐ ಅನಿಲ್ ಬಿ.ಎಂ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































































































error: Content is protected !!
Scroll to Top