ಮುಂಬಯಿ ಹೋಟೆಲ್‌ ಉದ್ಯಮಿ ಶವ ಶಾಂಭವಿ ಹೊಳೆಯಲ್ಲಿ ಪತ್ತೆ

ಕಾಲು ಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ

ಕಾರ್ಕಳ: ಮುಂಬಯಿಯಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದ ಮುಂಡ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ ಸಪಳಿಗ (68) ಎಂಬವರ ಮೃತದೇಹ ಇಂದು ಬೆಳಗ್ಗೆ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ. ವಿಪರೀತ ಮದ್ಯಪಾನದ ಚಟ ಹೊಂದಿದ್ದ ರಮೇಶ್‌ ಸಪಳಿಗ ಅವರು ಕೆಲ ಸಮಯದ ಹಿಂದೆ ಸಹೋದರ ಅನಾರೋಗ್ಯ ಪೀಡಿತರಾದ ಹಿನ್ನೆಲೆಯಲ್ಲಿ ಊರಿಗೆ ಬಂದವರು ವಾಪಸು ಹೋಗಿರಲಿಲ್ಲ. ಮಾ.29ರಂದು ರಾತ್ರಿ 9 ಗಂಟೆಗೆ ಮದ್ಯಪಾನ ಮಾಡಲೆಂದು ಮನೆಯಿಂದ ಮುಂಡ್ಕೂರಿಗೆ ಹೋದವರು ವಾಪಸು ಬಂದಿರಲಿಲ್ಲ. ಇಂದು ಬೆಳಗ್ಗೆ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಿರುವ ನಾಗಬನದ ಹತ್ತಿರ ಹೊಳೆಯಲ್ಲಿ ಮೃತದೇಹ ಸಿಕ್ಕಿದೆ. ಮದ್ಯಪಾನ ಮಾಡಿ ಬರುವಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ರಮೇಶ ಸಪಳಿಗ ಅವರ ಪುತ್ರ ಯೋಗೀಶ್‌ ಸಪಳಿಗ ನೀಡಿದ ದೂರಿನ ಪ್ರಕಾರ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































































































error: Content is protected !!
Scroll to Top