ಕಾಂಗ್ರೆಸ್‌ ಪಟ್ಟಿ ಬಿಡುಗಡೆ : ಸಿದ್ದರಾಮಯ್ಯಗೆ ವರುಣಾ ಕ್ಷೇತ್ರ

ಕಾಪುವಿನಿಂದ ಸೊರಕೆ, ಕುಂದಾಪುರದಿಂದ ದಿನೇಶ್‌ ಹೆಗ್ಡೆ, ಮೂಡುಬಿದಿರೆಯಿಂದ ಮಿಥುನ್‌ ರೈ ಸ್ಪರ್ಧೆ

ಬೆಂಗಳೂರು : ಬಹು ಸಮಯದಿಂದ ನಿರೀಕ್ಷಿಸುತ್ತಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬೆಳಗ್ಗೆ ದಿಢೀರ್‌ ಎಂದು ಬಿಡುಗಡೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯ ಹೆಸರಿದ್ದು, ಅವರಿಗೆ ವರುಣಾ ಕ್ಷೇತ್ರವನ್ನು ನೀಡಲಾಗಿದೆ. ಇದರೊಂದಿಗೆ ಸಿದ್ದರಾಮಯ್ಯ ಅವರ ಕ್ಷೇತ್ರ ಗೊಂದಲ ಬಗೆಹರಿದಿದೆ. ವರುಣಾದಲ್ಲಿ ಪ್ರಸ್ತುತ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಶಾಸಕರಾಗಿದ್ದಾರೆ.
ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರಿದ್ದು, ನಂಜನಗೂಡಿನಲ್ಲಿ ಧ್ರುವ ನಾರಾಯಣ್‌ ಅವರ ಪುತ್ರ ದರ್ಶನ್‌,ಕನಕಪುರದಿಂದ ಡಿ. ಕೆ. ಶಿವಕುಮಾರ್‌, ದೇವನಹಳ್ಳಿಯಿಂದ ಎಚ್‌. ಸಿ. ಮುನಿಯಪ್ಪ ಸ್ಪರ್ಧಿಸಲಿದ್ದಾರೆ.
ಕಾಪುವಿನಿಮದ ವಿನಯ್‌ ಕುಮಾರ್‌ ಸೊರಕೆ, ಕುಂದಾಪುರದಿಂದ ಎಂ. ದಿನೇಶ್‌ ಹೆಗ್ಡೆ, ಬೈಂದೂರಿನಿಂದ ಗೋಪಾಲ್‌ ಪೂಜಾರಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಮೂಡುಬಿದಿರೆಯಿಂದ ಮಿಥುನ್‌ ರೈ, ಬೆಳ್ತಂಗಡಿ ರಕ್ಷಿತ್‌ ಶಿವರಾಮ್‌., ಉಳ್ಳಾಲ ಕ್ಷೇತ್ರದಿಂದ ಯು.ಟಿ ಖಾದರ್‌, ಬಂಟ್ವಾಳದಿಂದ ರಮಾನಾಥ ರೈ, ಸುಳ್ಯ ಕ್ಷೇತ್ರದಿಂದ ಕೃಷ್ಣಪ್ಪ ಜಿ. ಸ್ಪರ್ಧಿಸಲಿದ್ದಾರೆ.



















































































error: Content is protected !!
Scroll to Top