ಶಿಕ್ಷಣ ಸಂಸ್ಥೆಗಳ ವ್ಯವಹಾರ ನಿರ್ವಹಿಸಲು ನಿವೃತ್ತ ಕೆಎಎಸ್ ಅಧಿಕಾರಿ ನೇಮಿಸಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಯಸಿದ್ದರು!

ಶ್ರವಣಬೆಳಗೊಳ : ಶ್ರವಣಬೆಳಗೊಳದ ದಿಗಂಬರ ಜೈನಮಠದ ಪ್ರಮುಖ ಜೈನ ಮಠಾಧೀಶ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಹಠಾತ್ ನಿಧನದಿಂದ ಸಮಾಜದ ವಿವಿಧ ವರ್ಗಗಳ ಜನರು ದುಃಖತಪ್ತರಾಗದ್ದಾರೆ. ಸ್ವಾಮೀಜಿ ಸಕ್ರಿಯರಾಗಿದ್ದರು ಅವರಿಗೆ, ಯಾವುದೇ ಕಾಯಿಲೆಯ ಲಕ್ಷಣಗಳಿಲ್ಲ ಎಂದು ಮೂರು ದಶಕಗಳ ಕಾಲ ಸ್ವಾಮೀಜಿಯವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ ಪರಾಸ್ ಹೇಳಿದ್ದಾರೆ. ಮಠದ ಆಡಳಿತಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಬುಧವಾರವೂ ಚರ್ಚೆ ನಡೆಸಿದ್ದರು. ಮಧುಮೇಹ ಹೊರತು ಪಡಿಸಿದರೆ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಚೆನ್ನಾಗಿತ್ತು. ಬುಧವಾರ ರಾತ್ರಿಯವರೆಗೂ ಅವರು ಕ್ರಿಯಾಶೀಲರಾಗಿದ್ದರು ಎಂದು ಅವರು ಹೇಳಿದರು.
ಮಠದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲು ಸ್ವಾಮೀಜಿ ಬಯಸಿದ್ದರು ಮತ್ತು ಇತ್ತೀಚೆಗೆ ಚನ್ನರಾಯಪಟ್ಟಣ ತಾಲೂಕಿನ ತಹಶೀಲ್ದಾರ್ ವರಪ್ರಸಾದ್ ರೆಡ್ಡಿ ಅವರೊಂದಿಗೆ ಚರ್ಚಿಸಿದ್ದರು. ಇತ್ತೀಚೆಗೆ ಶ್ರವಣಬೆಳಗೊಳದ ದಿಗಂಬರ ಜೈನಮಠದ ಆಡಳಿತಕ್ಕೆ ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಿಸುವಂತೆ ರೆಡ್ಡಿಗೆ ಕೇಳಿಕೊಂಡಿದ್ದರು ಎಂದು ಪರಸ್ ಹೇಳಿದರು.



















































































error: Content is protected !!
Scroll to Top