ಶೂಟಿಂಗ್‌ ವೇಳೆ ಬಿದ್ದು ಅಮಿತಾಭ್‌ ಬಚ್ಚನ್‌ಗೆ ಗಾಯ

ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ವೇಳೆ ಘಟನೆ

ಮುಂಬಯಿ : ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಬಿದ್ದ ಬಿರುಸಿಗೆ ಅಮಿತಾಭ್ ಬಚ್ಚನ್​ ಪಕ್ಕೆಲುಬು ಬಳಿ ಗಾಯವಾಗಿವಾಗಿದೆ.‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ ಸಂಭವಿಸಿದೆ.
ಚಿತ್ರೀಕರಣ ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬಯಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೇರುನಟರಾಗಿರುವ ಅಮಿತಾಭ್‌ ಬಚ್ಚನ್‌ ಎರಡು ಬಾರಿ ಕೋವಿಡ್‌ ಗೆದ್ದಿದ್ದರು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಭ್‌ ಹೇಳಿಕೊಂಡಿದ್ದರು. ಆಗ ಕೆಲವು ಅಂಗಾಂಗಗಳು ಕೆಲಸ ಮಾಡುತ್ತಿರಲಿಲ್ಲ.‌ ಇದರ ಬಗ್ಗೆ ನಾನು ಹೆಚ್ಚಿಗೆ ಹೇಳಿದರೆ, ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾನೆ ಎಂದು ನೀವು ತಪ್ಪು ತಿಳಿಯಬಹುದು ಎಂದು ಟ್ವೀಟ್ ಮಾಡಿದ್ದರು.
ನಾನು ಇನ್ನು ಜೀವನವೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ವೈದ್ಯರ ಸತತ ಪ್ರಯತ್ನ, ಅಭಿಮಾನಿಗಳ ಪ್ರೀತಿ, ಆಶಿರ್ವಾದ ನನ್ನನ್ನು ಕಾಪಾಡಿತು. ಅಂಗಾಂಗಳು ಮೊದಲಿನಂತೆ ಕೆಲಸ ಮಾಡದಿದ್ದರೂ, ಸದ್ಯಕ್ಕೆ ಪರವಾಗಿಲ್ಲ ಎಂದು ಅಮಿತಾಭ್‌ ಬರೆದುಕೊಂಡಿದ್ದರು ಆಗ ಅಭಿಮಾನಿಗಳು ಕಣ್ಣೀರಿಟ್ಟಿದ್ದರು.





























































































































































































































error: Content is protected !!
Scroll to Top