ಮತ್ತೆ ಬಂತಾ ಕೊರೊನಾ?

ಎಲ್ಲೆಡೆ ಕೆಮ್ಮು, ನೆಗಡಿ, ಜ್ವರ ಪ್ರಕರಣ ಏರಿಕೆ

ಬೆಂಗಳೂರು : ಎಲ್ಲೆಡೆ ನೆಗಡಿ, ಕೆಮ್ಮು, ಜ್ವರದ ಪ್ರಕರಣಗಳು ದಿಢೀರ್‌ ಎಂದು ಹೆಚ್ಚಳವಾಗಿದ್ದು, ಇದು ಕೊರೊನಾ ಮತ್ತೊಮ್ಮೆ ವಕ್ಕರಿಸಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ. ಕೇಂದ್ರ ಸರಕಾರ ಈಗಾಗಲೇ ಈ ಕುರಿತು ಮಾರ್ಗಸೂಚಿ ಹೊರಡಿಸಿದೆ.
ದೇಶದಲ್ಲಿ ಹೊಸ ವೈರಾಣು ಎಚ್3ಎನ್2 ಪ್ರಬೇಧ ಪತ್ತೆಯಾಗಿದೆ. ಆದರೆ ಅದು ಕೊರೊನಾ ವೈರಸ್‌ ಎಂದು ಕೇಂದ್ರ ಹೇಳಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿ ಕೆಲವು ಮಾರ್ಗಸೂಚಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಿದೆ. ಅದರಲ್ಲಿ ಕೊರೊನಾ ಕಾಲದಲ್ಲಿ ಹೊರಗೆ ಹೋಗಿ ಬಂದಾಗಲೆಲ್ಲ ಕೈ ತೊಳೆಯುವುದು, ಮಾಸ್ಕ್‌ ಧರಿಸುವುದು ಇತ್ಯಾದಿ ಸಲಹೆಗಳು ಇರುವುದರ ಹಿನ್ನೆಲೆಯಲ್ಲಿ ಇದು ಕೊರೊನಾ ಆಗಿರಬೇಕೆಂದು ಜನರು ಭಾವಿಸುತ್ತಿದ್ದಾರೆ. ರಾಜ್ಯದಲ್ಲಿ ಎಚ್3ಎನ್2 ವೈರಾಣು ಇನ್ನೂ ಪತ್ತೆಯಾಗಿಲ್ಲ. ಆದರೆ ನಾಳೆ ನಡೆಯುವ ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಡಾ. ಸುಧಾಕರ್‌ ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ವೈರಾಣುವಿನಿಂದ ದೀರ್ಘಾವಧಿಯ ಕೆಮ್ಮು ಇರಲಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ನಿನ್ನೆ ಕೂಡ ರಾಜ್ಯದಲ್ಲಿ 95 ಹಾಗೂ ಬೆಂಗಳೂರಿನಲ್ಲಿ 79 ಹೊಸ ಪ್ರಕರಣಗಳು ಪತ್ತೆಯಾಗಿವೆ.
100 ದಿನಗಳ ನಂತರ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣದಲ್ಲಿ ಹೆಚ್ಚಳಗಳು ಕಂಡು ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವುದು ಮತ್ತೆ ಹಾವಳಿ ಶುರುವಾಗುತ್ತಾ ಎಂಬ ಆತಂಕಕ್ಕೆ ಕಾರಣವಾಗಿದೆ.















































\















error: Content is protected !!
Scroll to Top