ಕಾರ್ಕಳ : ಉಡುಪಿಯ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಯೋಗಶಿಕ್ಷಣ – ಶಿಕ್ಷಕರ ತರಬೇತಿ ಕಾರ್ಯಾಗಾರ ಜ.27 ರಂದು ಹೆಬ್ರಿಯ ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಸಂಸ್ಥೆಯಲ್ಲಿ ಜರುಗಿತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ, ಪ್ರಸುತ್ತ ವಾತಾವರಣದಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಶಿಕ್ಷಣ ಅವಶ್ಯ. ಪ್ರಾಯೋಗಿಕ ಯೋಗ ಶಿಕ್ಷಣದ ಜೊತೆಗೆ ಪಠ್ಯಕ್ರಮ ಆಧಾರಿತ ಬೊಧನೆಯಿಂದ ಮಕ್ಕಳಿಗೆ ಆರೋಗ್ಯ ಕಾಳಜಿ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಮಾತನಾಡಿ, ವಿದ್ಯಾಭಾರತಿ ಕರ್ನಾಟಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಾಗಾರದಿಂದಾಗಿ ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.
ಸಂವಿತ್ ರಿಸರ್ಚ್ ಫೌಂಡೇಶನ್ ಬೆಂಗಳೂರು ಇದರ ಸಂಯೋಜಕ ಮಂಜುನಾಥ ಶಿಂಧೆ, ರಮೇಶ ಪ್ರಭು ಮುದ್ರಾಡಿ , ಸಂಜಯ್ ಕಲ್ಲಡ್ಕ, ಚಂದ್ರಶೇಖರ ಪುತ್ತೂರು ಮತ್ತು ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿ ಮಹೇಶ್ ಹೈಕಾಡಿ ಅವರು ಯೋಗ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಗುರೂಜಿ ಮಾತಾಜಿ ಸಮಿತಿಯ 72 ಪದಾಧಿಕಾರಿಗಳು, ವಿಷಯ ಪ್ರಮುಖರು ಭಾಗವಹಿಸಿದ್ದರು. ಅಮೃತಭಾರತಿ ಟ್ರಸ್ಟ್ ಸದಸ್ಯ ಬಾಲಕೃಷ್ಣ ಮಲ್ಯ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮಾತಾಜಿ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.
ಅಮೃತ ಭಾರತಿ ವಿದ್ಯಾಸಂಸ್ಥೆಯಲ್ಲಿ ಯೋಗಶಿಕ್ಷಣ ಶಿಕ್ಷಕರ ತರಬೇತಿ ಕಾರ್ಯಾಗಾರ
