ಹೆಬ್ರಿ ಕನ್ಯಾನದಲ್ಲಿ ಶ್ರೀರಾಮ‌ ಭಜನಾ ಮಹೋತ್ಸವ

ಹೆಬ್ರಿ : ಕನ್ಯಾನ ಶಿವಕೃಪಾದ ಎಸ್ ಕೆ. ಫರ್ನೀಚರ್ ಉದ್ಯಮ ಸಮೂಹದಲ್ಲಿ ಜ. 25 ರ ಸಂಜೆ ಶ್ರೀರಾಮ ಭಜನಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು. ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಸೂರಿಮಣ್ಣು ಮಠ ಶಿವಪುರ, ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ, ಮಟ್ಲುಪಾಡಿಯ ಅರ್ಧನಾರೀಶ್ವರ ಭಜನಾ ಮಂಡಳಿ, ವಿಘ್ನೇಶ್ವರ ಮಹಿಳಾ ಭಜನಾ ಮಂಡಳಿ ಹತ್ರಬೈಲು ಪೆರ್ಡೂರು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಾರ್ಯಕ್ರಮದ ವ್ಯವಸ್ಥಾಪಕ ಕೆ. ಶ್ರೀನಿವಾಸ ಸೇರ್ವೆಗಾರ್, ಜಯಶ್ರೀ ಎಸ್. ಸೇರ್ವೆಗಾರ್ ಮೊದಲಾದವರು ಉಪಸ್ಥಿತರಿದ್ದರು.

Latest Articles

error: Content is protected !!