ಹೆಬ್ರಿ : ಮುದ್ರಾಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸೆ.1 ರಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದರು. ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಗೃಹಸಚಿವರು ಮಂಗಳೂರಿಗೆ ತೆರಳುವ ದಾರಿಯಲ್ಲಿ, ಗಣಪತಿ ಮುದ್ರಾಡಿ ಇವರ ಆಮಂತ್ರಣದಂತೆ ಗಣೇಶೋತ್ಸವಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಹೆಗ್ಡೆ, ಪಂಚಾಯತ್ ಸದಸ್ಯ ಹಾಗೂ ಹಿರಿಯರಾದ ಗಣಪತಿ ಎಂ., ಸಂತೋಷ ಶೆಟ್ಟಿ, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಹೆಬ್ರಿ : ಮುದ್ರಾಡಿ ಸಾರ್ವಜನಿಕ ಗಣೇಶೋತ್ಸವ : ಗೃಹ ಸಚಿವರ ಭೇಟಿ


























